×
Ad

ಹನೂರು : ರೈತರಿಗೆ ಪರಿಹಾರ ಚೆಕ್ ವಿತರಣೆ

Update: 2018-09-29 17:40 IST

ಹನೂರು,ಸೆ.29 : ಕೊಳ್ಳೇಗಾಲದಿಂದ ಹನೂರು ರಸ್ತೆ ಅಭಿವೃದ್ದಿಯ ಕೆಶಿಫ್ ಯೋಜನೆಯಡಿ ಭೂಸ್ವಾಧಿನ ಮಂಜೂರಾತಿ ದೊರೆತಿರುವ ಹಿನ್ನಲೆ ರೈತರು, ಮಳಿಗೆಗಳ ಮಾಲೀಕರು ಸ್ವಯಂಪ್ರೇರಿತರಾಗಿ ತಾವೇ ಮುಂದೆ ಬಂದು ನೊಂದಾವಣಿ ಮಾಡಿ ಪರಿಹಾರ ಪಡೆದು ಈ ರಸ್ತೆ ಅಭಿವೃದ್ದಿಗೆ  ಕೈಜೋಡಿಸುವಂತೆ ಕೊಳ್ಳೇಗಾಲ ಉಪವಿಭಾಗಾದಿಕಾರಿ ಬಿ.ಫೌಝಿಯ ತರುನ್ನುಮ್ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಭೂಸ್ವಾಧೀನ ರೈತರಿಗೆ ಪರಿಹಾರ ಚೆಕ್ ವಿತರಣೆ ಮಾಡಿ ನಂತರ ಅವರು ಮಾತನಾಡಿದರು.

ಕೆಶಿಫ್ ಯೋಜನೆಯಡಿ ಪ್ಯಾಕೇಜ್ ಕೊಳ್ಳೇಗಾಲದಿಂದ ಹನೂರಿನವರೆಗೆ 23.8 ಕೀಲೋ ಮೀಟರ್ ಹೆದ್ದಾರಿ ಸಂಖ್ಯೆ 79 ರ ಅಭಿವೃದ್ದಿಗೆ ಸರ್ಕಾರದಿಂದ ಅಧಿಕೃತ ಆದೇಶದಂತೆ ಭೂಸ್ವಾಧಿನ 2014-31-05-2016 ರಂತೆ ಜಮೀನು ನೇರ ಖರೀದಿಗೆ ಮಂಜೂರಾತಿ ದೊರೆಕಿದ್ದು ರಸ್ತೆ ಅಭಿವೃದ್ದಿ ಅಗ್ರಹಾರ, ಸಿದ್ದಯ್ಯನಪುರ, ಮಧುವನಹಳ್ಳಿ, ಹಾರುವನಪುರ, ಚಿಕ್ಕಿಂದುವಾಡಿ, ದೊಡ್ಡಿಂದುವಾಡಿ, ಸಿಂಗನಲ್ಲೂರು, ಕೊಂಗರಹಳ್ಳಿ, ಆನಾಪುರ, ಮಂಗಲ, ಹುಲ್ಲೇಪುರ, ಹನೂರು ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿನ ಒಟ್ಟು 401 ಸರ್ವೇ ನಂಬರಗಳಲ್ಲಿ 68.06 ಎಕರೆ ಖಾಸಗಿ ಜಮೀನು ನೇರ ಖರೀದಿ ಮೂಲಕ ಭೂಸ್ವಾಧಿನಗೊಳಲಿದ್ದು, ಎಲ್ಲಾ 12 ಗ್ರಾಮಗಳ ಕೃಷಿ ಜಮೀನಿಗೆ ಬೆಲೆ ನಿಗದಿ ಪಡಿಸಿ ಯೋಜನಾ ನಿರ್ದೇಶಕರು ಯೋಜನೆ ಅನುಷ್ಠಾನ ಘಟಕ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ ಬೆಂಗಳೂರು 3.9.2018 ರ ನಡುವಳಿಯಂತೆ ಮಂಜೂರಾತಿ ನೀಡಿದ್ದು,  ಕೆಶಿಫ್ ವತಿಯಿಂದಲೇ 11 ಇ ಸ್ಕೆಚ್ ಪಡೆದು ಜಮೀನು ಕ್ರಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಪ್ರಥಮವಾಗಿ ಮಂಗಲ ಗ್ರಾಮದ ಒಟ್ಟು 6 ಸರ್ವೇ ನಂಬರ್‍ಗಳಲ್ಲಿ 54.75 ಎಕರೆ ಜಮೀನು ಖರೀದಿ ಕ್ರಯ ಪತ್ರ ನೋಂದಣಿ ಮಾಡಲಾಗಿದೆ. 5 ಮಂದಿ ರೈತರಿಗೆ 21,66,500 ಮೊತ್ತದ ಪರಿಹಾರ ಧನ ಕ್ರಾಸ್ ಚೆಕ್ ಪಾವತಿಸಲಾಗುತ್ತಿದೆ,  ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ಹನೂರು ಉಪನೊಂದಾಣಿ  ಕಾರ್ಯಕೈಗೊಳ್ಳಲಾಗಿದೆ, ನೇರ ಖರೀದಿ ಜಮೀನಿಗೆ ಉಪನೊಂದಾಣಿ ಕಛೇರಿಯ ಮಾರ್ಗಸೂಚಿ ಬೆಲೆಯ 2 ಪಟ್ಟು ಹೆಚ್ಚುವರಿ ಪರಿಹಾರ ಧನ  ಹಾಗೂ ಶೇ.100 ರಷ್ಟು ಸಾಂತ್ವಾನ ನಿಧಿ ಪರಿಹಾರ ಧನ ನೀಡಲಾಗುತ್ತಿದೆ ಅಕ್ಟೋಬರ್ 2018 ರ ಅಂತ್ಯದ ಒಳಗೆ ಶೇ 80 ರಷ್ಟು ಜಮೀನು ಖರೀದಿಗೆ ಗುರಿ ಇಟ್ಟುಕೊಳ್ಳಲಾಗಿದೆ.

ರಸ್ತೆ ಅಭಿವೃದಿ ಯೋಜನೆಯ ಮುಖ್ಯಾಂಶಗಳು 
• ಕೊಳ್ಳೇಗಾಲ ಹನೂರು ರಸ್ತೆ ಉದ್ದ 23.8 ಕೀಮೀ
• ಒಳಗೊಳ್ಳುವ ಗ್ರಾಮಗಳು 12
• ರಸ್ತೆ ಅಭಿವೃದ್ದಿಗೆ ನೇರ ಖರೀದಿಗೆ ಒಳಪಡುವ ಖಾಸಗಿ ಜಮೀನಿನ ವಿಸ್ತೀರ್ಣ 68.06 ಎಕರೆ
• ರಸ್ತೆ ಅಭಿವೃದ್ದಿ ಒಳಪಡುವ ಸರ್ಕಾರಿ ಜಮೀನಿನ ವಿಸ್ತೀರ್ಣ 1.92
• ಬೆಂಗಳೂರು ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ ಕೊಳ್ಳೇಗಾಳ ಪಟ್ಟಣದ ಗಡಿಯಿಂದ ಅಗ್ರಹಾರ ಸಿದ್ದಯ್ಯನಪುರ ಮತ್ತು ಮಧುವನಹಳ್ಳಿ ಗ್ರಾಮದ ಜಮೀನುಗಳ ಮೇಲೆ ಬೈಪಾಸ್ ರಸ್ತೆ ಮಾಡಲು ಯೋಜಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News