ಸುನಾಮಿಗೆ ಇಂಡೋನೇಶ್ಯ ತತ್ತರ

Update: 2018-09-29 18:05 GMT

ಇಂಡೋನೇಶ್ಯಯದ ಪಲು ಎಂಬಲ್ಲಿ ಶನಿವಾರ ಸುನಾಮಿಯ ಹೊಡೆತಕ್ಕೆ ಸಿಲುಕಿ ಮೃತಪಟ್ಟ ಪುಟ್ಟ ಬಾಲಕನ ಮೃತದೇಹವನ್ನು ವ್ಯಕ್ತಿಯೋರ್ವರು ಎತ್ತಿಕೊಂಡು ರೋಧಿಸುತ್ತಿರುವ ಮನಕಲಕುವ ದೃಶ್ಯ ಕಂಡುಬಂತು. ಇಂಡೋನೇಶ್ಯಯ ಭೂಕಂಪ ಮತ್ತು ಸುನಾಮಿಯಿಂದ ತತ್ತರಿಸಿದ್ದು ಪ್ರಕೃತಿಯ ಅಟ್ಟಹಾಸಕ್ಕೆ ಕನಿಷ್ಠ 400 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಧರೆಗುರುಳಿರುವ ಕಟ್ಟಡಗಳ ಅವಶೇಷಗಳು ಮತ್ತು ಸುನಾಮಿಯಲ್ಲಿ ಅನೇಕ ಜೀವಗಳು ಕೊಚ್ಚಿ ಹೋಗಿರುವುದರಿಂದ ಈ ಸಂಖ್ಯೆ ತೀವ್ರವಾಗಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor