ಕೊಳ್ಳೇಗಾಲ : ಜಲಾವೃತಗೊಂಡ ಮಧುವನಹಳ್ಳಿ ಗ್ರಾಮದ ಸುತ್ತಮುತ್ತಲ ಜಮೀನುಗಳು

Update: 2018-09-29 18:26 GMT

ಕೊಳ್ಳೇಗಾಲ,ಸೆ.29: ಕಬಿನಿ ಜಲಾಶಯದಿಂದ ಹೊರಹೊಮ್ಮುತ್ತಿರುವ ನೀರಿನಿಂದಾಗಿ ತಾಲೂಕಿನ ಮಧುವನಹಳ್ಳಿ ಗ್ರಾಮದ ಸುತ್ತಮುತ್ತಲ ಜಮೀನುಗಳು ಜಲಾವೃತ್ತಗೊಂಡಿದೆ. 

ಜಲಾಶಯದಿಂದ ಹೊರಹೊಮ್ಮಿದ್ದ ನೀರು ತಾಲ್ಲೂಕಿನ ಮಧುವನಹಳ್ಳಿ, ಸಿದ್ಯಯನಪುರ ಗ್ರಾಮದ ಸುತ್ತಮುತ್ತಲು ಇರುವ ಗುಂಡಾಲ್ ಚಾನೆಲ್‍ಗಳಲ್ಲಿ ತುಂಬಿ ಹರಿದು ಪರಿಣಾಮ ಜಮೀನುಗಳಿಗೆ ನುಗ್ಗಿ ಲಕ್ಷಾಂತರ ರೂ ಬೆಳೆ ನಷ್ಟ ಉಂಟಾಗಿದೆ.

ಮಧುವನಹಳ್ಳಿ, ಅರವರನಪುರ, ಸಿದ್ದಯ್ಯನಪುರ ಸೇರಿದಂತೆ ಸುತ್ತಮುತ್ತಲು ಸುಮಾರು 300 ರಿಂದ 400 ಎಕರೆ ಜಮೀನುಗಳು ಮುಳುಗಡೆಗೊಂಡಿದೆ. ಆಮೀನುಗಳಿಗೆ ಹೋಗುವ ರಸ್ತೆಗಳು ಮುಳುಗಡೆಗೊಂಡಿದ್ದು ರೈತರು ತಿರುಗಾಡಲು ಪರಡಾದುತ್ತಿದ್ದಾರೆ.

ಕಳೆದ 10 ದಿನಗಳ ನಾಟಿ ಮಾಡಿದ್ದ ಭತ್ತದ ಸಮೇತ ಕಬ್ಬು ಬೆಳೆಗಳಿ ನೀರು ನುಗ್ಗಿದ್ದ ಪರಿಣಾಮ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಜಮೀನುಗಳಲ್ಲಿರುವ ಬಾವಿಗಳು ಸೇರಿದಂತೆ ತೋಟದ ಮನೆಗಳು ಸಹ ಮುಳುಗಡೆಗೊಂಡಿದೆ.

ಅದಲ್ಲದೆ ಜಮೀನಿನ ಸಮೀಪ ನಿಲ್ಲಿಸಿದ್ದ ಬೈಕ್‍ವೊಂದು ಕೊಚ್ಚಿ ಹೊಗಿರುವ ಘಟನೆ ಜರುಗಿದ್ದು, ತಕ್ಷಣ ಎಚ್ಚೆತ್ತ ರೈತರು ಕೊಚ್ಚಿ ಹೋಗುತ್ತಿದ್ದ ಬೈಕ್‍ನ್ನು ಹೊರತೆಗೆದರು. ಇನ್ನೊಂದು ಎಡೆ ನೀರಿನ ರಭಸಕ್ಕೆ ಚಾನೆಲ್‍ಗಳ ಮೇಲ್ಚಾವಣಿಗಳು ಕೊಚ್ಚಿ ಹೋಗಿವೆ.

ಕಬಿನಿ ಜಲಾಶಯದಿಂದ ನೀರು ಹೊರ ಬಿಟ್ಟ ಕಾರಣ ಇಲ್ಲಿನ ಸುತ್ತಮುತ್ತಲ ಜಮೀನುಗಳು ಮುಳುಗಿ ನಷ್ಟ ಉಂಟಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ನಷ್ಟ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News