×
Ad

ಹನೂರು: ಅ.3ರಂದು ರಕ್ತದಾನ ಶಿಬಿರ

Update: 2018-09-30 22:27 IST

ಹನೂರು,ಸೆ.30: ಈ ಹಿಂದೆ ಜಾರಿಯಲ್ಲಿದ್ದ ಪಿಂಚಣಿ ಪದ್ದತಿಯನ್ನು ಮುಂದುವರಿಸುವಂತೆ ಆಗ್ರಹಿಸಿ ಅ.3ರಂದು ರಾಜ್ಯಾದ್ಯಂತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಅದರಂತೆ ಹನೂರು ಶೈಕ್ಷಣಿಕ ವಲಯದ ಎನ್.ಪಿ.ಎಸ್ ನೌಕರ ಸಂಘದ ಪಧಾದಿಕಾರಿಗಳು ಹೋಲಿಕ್ರಾಸ್ ಆಸ್ಪತ್ರೆ ಕಾಮಗೆರೆಯಲ್ಲಿ ಈ ಶಿಬಿರವನ್ನು ಆಯೋಜಿಸಿದ್ದಾರೆ.

ಈ ಕುರಿತು ಹನೂರು ವಲಯದ ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಪ್ರದೀಪ್‍ಕುಮಾರ್ ಮಾತನಾಡಿ, ಆ.3ರಂದು ಬೆಳ್ಳಿಗ್ಗೆ 10ರಿಂದ ಸಂಜೆ 5ರವರೆಗೆ ಹನೂರು ಸಮೀಪದ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಗುತ್ತಿದೆ. ಸರ್ಕಾರಿ ಸೇವೆಗೆ ಸೇರಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ಸಂದ್ಯಾಕಾಲದ ಬದುಕಿಗೆ ಭದ್ರತೆಯ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವಂತೆ ಒತ್ತಾಯಿಸಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಎನ್‍ಪಿಎಸ್ ನೌಕರ ಸಂಘದ ಗೌರವ ಸಂಘದ ಅಧ್ಯಕ್ಷ ಕಂದವೇಲು, ಉಪಾದ್ಯಕ್ಷ ಜವೇರಿಯ, ಪ್ರಧಾನ ಕಾರ್ಯದರ್ಶಿ ಪ್ರೀತಮ್ , ಕಾರ್ಯಕಾರಿ ಸಮಿತಿ ಸದಸ್ಯ ರಘುನಂದನ್ ಹಾಗೂ ಪದಾಧಿಕಾರಿಗಳು ಸೇರಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News