ದಸರಾ: ವಿಂಟೇಜ್ ಕಾರುಗಳ ಪ್ರದರ್ಶನ

Update: 2018-10-01 18:17 GMT

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ದಸರಾ ಆನೆಗಳ ತಾಲೀಮಿನ ಜೊತೆಗೆ ವಿಂಟೇಜ್ ಕಾರುಗಳ ಪ್ರದರ್ಶನ ನಡೆಯಿತು. ದಸರಾ ಮಹೋತ್ಸವಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯಿಂದ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸೋಮವಾರ ಮೈಸುರು ದಸರೆಗೆ ಆಗಮಿಸಿರುವ ಆನೆಗ ತಾಲೀಮಿನ ಜೊತೆ ವಿಂಟೇಜ್ ಕಾರುಗಳು ಕೂಡ ತಾಲೀಮಿನಲ್ಲಿ ಭಾಗಿಯಾಗಿದ್ದವು. ಹಲವು ದಶಕಗಳ ಹಿಂದೆ ರಾಜ ಮಹಾರಾಜರುಗಳ, ಸಿರಿವಂತರ ಸಂದೇತವಾಗಿದ್ದ ವಿಂಟೇಜ್, ಲಾಂಕೆಸ್ಟರ್ ನಂತಹ ಎವರ್‌ಗ್ರೀನ್ ಕಾರುಗಳು ಮೈಸೂರು ದಸರಾದಲ್ಲಿ ಪಾಲ್ಗೊಂಡು ಮೈಸೂರು ದಸರಾಕ್ಕೆ ಮತ್ತಷ್ಟು ಮೆರುಗು ತಂದು ಕೊಡುತಿದ್ದವು. ಹಾಗಾಗಿ ಭಾರತೀಯ ಫೆಡರೇಷನ್ ಆಫ್ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಸಂಸ್ಥೆಯಿಂದ ಲಲಿತ್‌ಮಹಲ್ ಹೋಟೆಲ್ ಬಳಿ ರವಿವಾರ ವಿಂಟೇಜ್ ಕಾರುಗಳ ಫೆಸ್ಟಿವಲ್ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor