ಧಾರವಾಡ: ಅ.23ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

Update: 2018-10-02 15:20 GMT

ಧಾರವಾಡ, ಅ.2: 2018-19 ನೆ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಗಳನ್ನು ಅ.23ರ ಬೆಳಗ್ಗೆ 9ಗಂಟೆಗೆ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ.

ಆಸಕ್ತಿಯುಳ್ಳ 15 ರಿಂದ 29 ವರ್ಷದೊಳಗಿನ ಕಾಲೇಜು ಯುವಕ, ಯುವತಿಯರು ಹಾಗೂ ಯುವಕ, ಯುವತಿ ಮಂಡಳದ ಹಾಲಿ ಸದಸ್ಯರು ಜಾನಪದ ನೃತ್ಯ, ಜಾನಪದ ಗೀತೆ, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಏಕಾಂಕ ನಾಟಕ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದ್ಯ ಸಂಗೀತ, ಹಾರ್ಮೋನಿಯಂ, ಗಿಟಾರ, ಶಾಸ್ತ್ರೀಯ ನತ್ಯ, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಆಶುಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಲು ತಮ್ಮ ತಂಡದ ಪ್ರವೇಶ ಪತ್ರಗಳನ್ನು ಅ.20ರೊಳಗಾಗಿ ಕಳುಹಿಸಬೇಕು.

ಹೆಚ್ಚಿನ ವಿವರಗಳಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 0836-2447424 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News