×
Ad

ಹನೂರು: 64ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ

Update: 2018-10-02 21:05 IST

ಹನೂರು,ಅ.2: ವಿದ್ಯಾರ್ಥಿ, ಯುವಕರಲ್ಲಿ ವನ್ಯಜೀವಿ ಮತ್ತು ಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಕುರಿತು ಜಾಗೃತಿ ಮೂಡಿಸುವ ಮಹತ್ತರವಾದ ಕಾರ್ಯಕ್ರಮ ಇದಾಗಿದೆ ಎಂದು ರಾಮಾಪುರ ವನ್ಯಜೀವಿ ವಲಯದ ಅರಣ್ಯಾಧಿಕಾರಿ ರಾಜೇಶ್ ಗವಾಲ್ ತಿಳಿಸಿದರು. 

ಕಾವೇರಿ ವನ್ಯಜೀವಿ ವಲಯ ಮತ್ತು ರಾಮಾಪುರ ವನ್ಯಜೀವಿ ವಲಯದ ವತಿಯಿಂದ ಕೌದಳ್ಳಿ ಮಹದೇಶ್ವರ ಪ್ರೌಡಶಾಲೆಯ 64ನೇ ವನ್ಯಜೀವಿ ಸಪ್ತಾಹ 2018ರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಇಂತಹ ಮಹತ್ವದ ಕಾಯಕ್ರಮಗಳಲ್ಲಿ ಪ್ರತಿಯೊಬ್ಬ ಪಾಲ್ಗೊಳ್ಳಬೇಕೆಂದರು. 

ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಣ್ಯಕ್ಕೆ ಸಂಬಂಧಿಸಿದಂತೆ ಆಶುಭಾಷಣ, ಪ್ರಾಣಿಗಳನ್ನು ಗುರುತಿಸುವ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಮಹದೇಶ್ವರ ಪ್ರೌಡಶಾಲೆ ಶಿಕ್ಷಕ ರಾಮಕೃಷ್ಣಯ್ಯ, ಅರಣ್ಯ ಇಲಾಖೆ ಸಿಬ್ಬಂದಿ ಅನಂತರಾಮು, ಚಂದ್ರೇಗೌಡ, ರಾಜೇಶ್ , ಪ್ರಸನ್ನಕುಮಾರ್, ಮಹೇಶ್, ಗಣೇಶ್‍ ಪ್ರಸಾದ್ ಮೋಹನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News