×
Ad

ಮಂಡ್ಯ: ಎತ್ತಿನಗಾಡಿ ಕೆರೆಗೆ ಬಿದ್ದು ತಂದೆ-ಮಗ ಮೃತ್ಯು

Update: 2018-10-02 21:28 IST

ಮಂಡ್ಯ, ಅ.2: ಎತ್ತುಗಳಿಗೆ ಗಾಡಿ ಎಳೆಯುವ ಪಾಠ ಕಲಿಸಲು ಹೋಗಿದ್ದ ರೈತ ಹಾಗೂ ಆತನ ಪುತ್ರ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ನಡೆದಿದೆ.

ಹಾಡ್ಲಿ ಗ್ರಾಮದ ಶಿವಣ್ಣ (51) ಮತ್ತು ಇವರ ಮಗ ಸ್ವಂದನ್ (21) ಮೃತಪಟ್ಟವರು ಎಂದು ತಿಳಿದು ಬಂದಿದೆ.  

ನಿಯಂತ್ರಣ ತಪ್ಪಿ ಎತ್ತಿನಗಾಡಿ ಸಮೇತ ಕೆರೆಗೆ ಬಿದ್ದ ತಂದೆ ಮಗ ಅದರ ಕೆಳಗೆ ಸಿಕ್ಕಿಕೊಂಡು ಕೆರೆಯಿಂದ ಬರಲು ಸಾಧ್ಯವಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News