ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣ: ಶರಣಾದ ಅರೋಪಿಗಳು ನ್ಯಾಯಾದೀಶರ ಮುಂದೆ ಹಾಜರು
Update: 2018-10-03 22:42 IST
ತುಮಕೂರು,ಅ.3: ತುಮಕೂರಿನ ಬಟವಾಡಿ ಬಳಿ ನಡೆದ ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣದಲ್ಲಿ ಶರಣಾದ ಆರೋಪಿಗಳನ್ನು ಪೊಲೀಸರು ನ್ಯಾಯಾದೀಶರ ಮುಂದೆ ಹಾಜರುಪಡಿಸಿದ್ದಾರೆ.
ರೌಡಿಶೀಟರ್ ಸುಜಯ್ ಭಾರ್ಗವ ಅಲಿಯಾಸ್ ಸುಜಿ ಹಾಗೂ ಸಹಚರ ರಘುವನ್ನು 6ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯದೀಶ ಹೆಚ್.ಎಸ್ ಮಲ್ಲಿಕಾರ್ಜುನ ಸ್ವಾಮಿ ಮುಂದೆ ಹಾಜರುಪಡಿಸಿದ್ದಾರೆ.
ಆರೋಪಿಗಳು ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಶರಣಾಗಿದ್ದರು. ಇಂದು ಅವರನ್ನು ಕ್ಯಾತ್ಸಂದ್ರ ಪೋಲಿಸರು ಕೊರ್ಟ್ ಗೆ ಹಾಜರು ಪಡಿಸಿದ್ದಾರೆ.
ಕ್ಯಾತ್ಸಂದ್ರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.