ಬ್ರಾಹ್ಮಣರು ರಾಕ್ಷಸರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು: ಪ್ರೊ.ಕೆ.ಎಸ್.ಭಗವಾನ್

Update: 2018-10-03 17:32 GMT

ಮೈಸೂರು,ಅ.3: ಮಹಿಷ ಒಬ್ಬ ಜನಾನುರಾಗಿ ರಾಜ. ಕ್ಷೇತ್ರದ ಕಲ್ಯಾಣಕ್ಕಾಗಿ ದುಡಿಯುತ್ತಿದ್ದ. ಆದರೆ ಇತಿಹಾಸವನ್ನು ತಿರುಚಲಾಗಿದ್ದು, ಅವನೊಬ್ಬ ರಾಕ್ಷಸ ಎಂಬುದು ಕಪೋಲಕಲ್ಪಿತವಾಗಿದ್ದು, ಒಂದೊಮ್ಮೆ ರಾಕ್ಷಸನಾಗಿದ್ದರೆ ಅವನ ಹೆಸರನ್ನು ಮೈಸೂರಿಗೆ ಇಡಲು ಸಾಧ್ಯವೇ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಪ್ರಶ್ನಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಮಹಿಷಾ ದಸರಾ ಸಮಿತಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದಲ್ಲಿ ರಾಕ್ಷಸ ರೂಪದ ಮಹಿಷನ ಪ್ರತಿಮೆ ಕೆಡವಬೇಕು. ಅದೇ ಸ್ಥಳದಲ್ಲಿ ಬೌದ್ಧ ಬಿಕ್ಕುವಿನ ರೂಪದಲ್ಲಿರುವ ಮಹಿಷನ ಪ್ರತಿಮೆ ಸ್ಥಾಪಿಸಬೇಕು ಎಂದು ಹೇಳಿದ ಅವರು, ಅಂದಿನ ಮೈಸೂರು ರಾಜರು ಪುರೋಹಿತಶಾಹಿಗಳ ಮಾತು ಕೇಳಿ ರಕ್ಕಸ ರೂಪದಲ್ಲಿ ಇರುವ ಮಹಿಷನ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಧರ್ಮವನ್ನು ಸ್ವಾಮಿ ವಿವೇಕಾನಂದರಷ್ಟು ಯಾರೂ ಟೀಕಿಸಿಲ್ಲ. ಬ್ರಾಹ್ಮಣರು ರಾಕ್ಷಸರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಬುದ್ಧ ಬಂದು ಅಸಮಾನತೆಯನ್ನು ವಿರೋಧಿಸಿದ್ದನು. ಬುದ್ಧ ಕಳ್ಳ ಎಂದು ರಾಮನ ಬಾಯಲ್ಲಿ ಬ್ರಾಹ್ಮಣರು ಬೈಯಿಸಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News