ದಾವಣಗೆರೆ: ರಾಜ್ಯ ಸರಕಾರದ ವಿರುದ್ಧ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರಿಂದ ಧರಣಿ

Update: 2018-10-05 17:31 GMT

ದಾವಣಗೆರೆ, ಅ.5: ರಾಜ್ಯ ಸರಕಾರ ವಿಲೀನದ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಡಿಸಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರಕಾರ ದೇಶದಲ್ಲಿರುವ ಸಾವಿರಾರು ಭಾಷೆಗಳನ್ನು ನಿರ್ನಾಮ ಮಾಡಿದೆ. ಇನ್ನು ಅಳಿದು ಉಳಿದ ಭಾಷೆಗಳನ್ನು ಮುಗಿಸಿ ಒಂದೇ ದೇಶ ಒಂದೇ ಭಾಷೆ ಎನ್ನುವ ಕೊನೆಯ ಇತ್ಯರ್ಥಕ್ಕಾಗಿ ಸ್ವಾತಂತ್ರ್ಯದ ನಂತರ ಸಂಚು ನಡೆಯುತ್ತಲೇ ಬರುತ್ತಿದೆ. ಇದರ ಅಂಗವಾಗಿ ಮಕ್ಕಳ ಹಕ್ಕು, ಪೋಷಕರ ಹಕ್ಕು ಎಂದು ನ್ಯಾಯಲಯದ ಆದೇಶ ತೋರಿಸಿ ಎಲ್ಲವನ್ನು ಆಂಗ್ಲಮಯ ಮಾಡಲಾಗುತ್ತಿದೆ. ಅಲ್ಲದೇ ಆರ್‍ಟಿಇ ಮೂಲಕ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ವ್ಯವಸ್ಥಿತವಾಗಿ ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಈ ಕೂಡಲೇ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಡಬೇಕು. ಈಗಾಗಲೇ 14,347 ಸರ್ಕಾರಿ ಶಾಲೆಗಳ ವಿಲೀನಿಕರಣದ ಪಟ್ಟಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಲ್.ಸಿ. ನೀಲಗಿರಿ, ರಾಜ್ಯ ಕಾರ್ಯಾಧ್ಯಕ್ಷ ರಾಧಾಕೃಷ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News