ಲೈಂಗಿಕತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯ ಒಪ್ಪುವುದಿಲ್ಲ: ಅರುಣ್ ಜೇಟ್ಲಿ

Update: 2018-10-06 11:26 GMT

ಹೊಸದಿಲ್ಲಿ, ಅ.6: ಲೈಂಗಿಕತೆಯ ಬಗೆಗಿನ ನಿಲುವು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೆಂದು ಸೆಕ್ಷನ್ 377ರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ತಾವು ಒಪ್ಪುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕಳೆದ ವಾರ ಸೆಕ್ಷನ್ 377 ಬಗ್ಗೆ ತೀರ್ಪು ನೀಡಿ ಸಲಿಂಗಕಾಮ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ಉಲ್ಲೇಖಿಸಿದ ಜೇಟ್ಲಿ, “ವ್ಯಕ್ತಿಯೊಬ್ಬನಿಗೆ ತನ್ನದೇ ಆದ ಲೈಂಗಿಕತೆಯ ಬಗೆಗಿನ ನಿಲುವು ಸಹಜ. ಇದೇ ಕಾರಣದಿಂದಾಗಿ ಆತನ ಬಗ್ಗೆ ತಾರತಮ್ಯಕಾರಿ ನಿಲುವು ತಳೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹೇಳಿದ್ದು ಸ್ವಲ್ಪ ಅತಿಯಾಯಿತು'' ಎಂದು ಅಭಿಪ್ರಾಯ ಪಟ್ಟರಲ್ಲದೆ ಸುಪ್ರೀಂ ಕೋರ್ಟಿನ ಈ ನಿಲುವಿನ ಬಗ್ಗೆ  ಚರ್ಚೆಯ ಅಗತ್ಯವಿದೆ ಎಂದರು. “ಹೀಗಾದರೆ ಸೇನೆಯಲ್ಲಿ, ಶಾಲಾ ಹಾಸ್ಟೆಲುಗಳಲ್ಲಿ ಲೈಂಗಿಕ ಚಟುವಟಿಕೆಗಳನ್ನು ಹೇಗೆ ನಿಯಂತ್ರಿಸುವುದು?'' ಎಂದು ಅವರು ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೇಟ್ಲಿ, ``ನ್ಯಾಯಾಲಯ ಹಲವಾರು  ಅಭಿಪ್ರಾಯಗಳನ್ನು ಪರಿಗಣಿಸಿದ್ದರೂ ಇಂತಹ ಐತಿಹಾಸಿಕ  ತೀರ್ಪುಗಳನ್ನು ನೀಡುವ ವೇಳೆ ಕೆಲವೊಮ್ಮೆ  ಅತ್ಯುತ್ಸಾಹದಿಂದ ಹೀಗಾಗಬಹುದು,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News