×
Ad

ಹಲ್ಲೆ ಪ್ರಕರಣ: ಆರೋಪಿಗೆ 2 ವರ್ಷ ಜೈಲು

Update: 2018-10-06 23:29 IST

ಮೈಸೂರು,ಅ.6: ಯುವತಿಯೋರ್ವರನ್ನು ಪ್ರೀತಿಸುವಂತೆ ಪೀಡಿಸಿ ಅವರ ತಂದೆ ಹಾಗೂ ಸಹೋದರರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯೋರ್ವನಿಗೆ ಮೂರನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷಗಳ ಕಠಿಣ ಸಜೆ ಮತ್ತು 5ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.

ಎಸ್.ಮಾದೇಶ ಎಂಬಾತ ಯುವತಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕಾಗಿ ಆತನಿಗೆ ಬುದ್ಧಿ ಹೇಳಿದ ಯುವತಿಯ ತಂದೆ, ಸೋದರರ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದ್ದರಿಂದ ನ್ಯಾಯಾಧೀಶರಾದ ಎಸ್.ಸುದೇಂದ್ರನಾಥ್ ಅವರು ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ. ಸರ್ಕಾರದ ಪರವಾಗಿ ವಾಸಂತಿ ಎಂ.ಅಂಗಡಿ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News