ಅಘಲಯ ಕೆರೆಯಲ್ಲಿ ವೃದ್ಧೆಯ ಮೃತದೇಹ ಪತ್ತೆ
Update: 2018-10-07 20:30 IST
ಮಂಡ್ಯ, ಅ.7: ಕೆ.ಆರ್.ಪೇಟೆ ತಾಲೂಕು ಸಂತೆಬಾಚಹಳ್ಳಿ ಹೋಬಳಿ ಅಘಲಯ ಕೆರೆಯ ದಡದಲ್ಲಿ ಸುಮಾರು 70 ವಯಸ್ಸಿನ ವೃದ್ಧ ಮಹಿಳೆಯ ಮೃತದೇಹ ರವಿವಾರ ಪತ್ತೆಯಾಗಿದೆ.
ವೃದ್ಧ ಮಹಿಳೆ ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿ ಕುಪ್ಪಳಿ ಗ್ರಾಮದ ಪೂಜಾರಿ ನಾಗಯ್ಯ ಅವರ ಪತ್ನಿ ಕಾಳಮ್ಮ ಎಂದು ಗುರುತಿಸಲಾಗಿದೆ.
ಈಕೆ ಮೂರು ದಿನದ ಹಿಂದೆ ಕಾಣೆಯಾಗಿದ್ದಾರೆಂದು ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೆ.ಆರ್.ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.