×
Ad

ರಾಮಾಪುರ: ಸರಕಾರಿ ಪ್ರೌಢಶಾಲೆಯ ಬಾಗಿಲು, ಪೀಠೋಕರಣ ಧ್ವಂಸಗೈದ ಕಿಡಿಗೇಡಿಗಳು

Update: 2018-10-07 21:30 IST

ಹನೂರು, ಅ.7: ತಾಲೂಕಿನ ರಾಮಾಪುರದ ಸರಕಾರಿ ಪ್ರೌಢಶಾಲೆಯ ಎರಡು ಕೂಠಡಿಯ ಬಾಗಿಲು ಸೇರಿ ಹಲವು ಪೀಠೋಕರಣವನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಶನಿವಾರ ನಡೆದಿದೆ.

ಈ ಸಂಬಂಧ ರಾಮಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿವಾರ ಬೆಳಗ್ಗೆ ರಾಮಾಪುರದ ಕೆಲ ನಿವಾಸಿಗಳು ವಾಯುವಿಹಾರಕ್ಕೆಂದು ಶಾಲೆಯ ಮೈದಾನಕ್ಕೆ ತೆರಳಿದ ವೇಳೆ ಈ ಘಟನೆ ನೆಡದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಪೋಲಿಸರಿಗೆ ಮತ್ತು ಶಾಯ ಶಿಕ್ಷಕರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ವಿಷಯ ತಿಳಿದು ಹನೂರು ಬಿಆರ್‌ಸಿ ಕ್ಯಾತ, ಸಿಆರ್‌ಪಿ ವಿರುಪಾಕ್ಷ ಶಾಲಾ ಶಿಕ್ಷಕರು ಮತ್ತು ರಾಮಾಪುರ ಪೋಲಿಸ್ ಠಾಣೆ ಇನ್‌ಸ್ಪೆಕ್ಟರ್ ಮನೋಜ್‌ಕುಮಾರ್ ಸ್ಥಳಕ್ಕೆ ಆಗಮಿಸಿ ಕೂಠಡಿಗಳನ್ನು ಪರಿಶೀಲಿಸಿ ಜಿಲ್ಲಾ ಸ್ವಾನ ದಳ ಮತ್ತು ಬೆರಳಚ್ಚು ತಜ್ಞರಿಗೆ ಮಾಹಿತಿ ನೀಡಿದರು.

ಶಾಲಾ ದಾಖಲಾತಿಗಳು ಸುಭದ್ರ: ಚಾಮರಾಜನಗರದಿಂದ ಆಗಮಿಸಿದ ಸ್ವಾನ ದಳದ ಸಿಬ್ಬಂದಿ ಮತ್ತು ಬೆರಳಚ್ಚು ತಜ್ಞರು ಧ್ವಂಸವಾದ ಕೂಠಡಿಗಳ ಪರಿಶೀಲನೆ ನಡೆಸಿದ್ದು, ಕಿಡಿಗೇಡಿಗಳು ಟಿವಿ, ರೇಡಿಯೋ , ಝರಾಕ್ಸ್ ಮಿಷನ್‌ನ ಹಾಗೂ ಮತ್ತಿತರ ಪೀಠೋಪಕರಣಗಳನ್ನು ಒಡೆದಿದ್ದಾರೆ. ಆದರೆ, ಶಾಲೆ ಸಂಬಂಧಿಸಿದ ಎಲ್ಲ ದಾಖಲಾತಿಗಳು ಸುಭದ್ರವಾಗಿದೆ ಎಂದು ಶಾಲಾ ಶಿಕ್ಷಕರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ರಾಮಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದ್ದು, ಪೋಲಿಸರು ಮುಂದಿನ ಕ್ರಮ ಕೈಗೂಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News