ಸುಂಟಿಕೊಪ್ಪ : ಗದ್ದೆಗೆ ಕಾಡಾನೆಗಳ ಹಿಂಡು ದಾಳಿ

Update: 2018-10-07 17:40 GMT

ಸುಂಟಿಕೊಪ್ಪ,ಅ.7: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ  ಕಾನ್ ಬೈಲು ಬೈಚನ ಹಳ್ಳಿ ನಿವಾಸಿ ಅಣ್ಣುನಾಯ್ಕ ಎಂಬವರ ಗದ್ದೆಗೆ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದ ಪರಿಣಾಮ ಸುಮಾರು 50 ಸಾವಿರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ.

ಈ ಬಾರಿ ಅತಿವೃಷ್ಠಿಯಿಂದ ಬೆಳೆ ನಷ್ಟ ಗೊಂಡಿದ್ದು ಇದೀಗ ಕಾಡಾನೆಗಳು ನಾಟಿ ಮಾಡಿದ ಗದ್ದೆಗಳಿಗೆ ದಾಳಿ ಮಾಡಿ ಪೈರುಗಳನ್ನು ತಿಂದು ತುಳಿದು ದ್ವಂಸಗೊಳಿಸಿ ನಂತರ ಬಾಳೆ ತೆಂಗು ಭಾರಿ ಪ್ರಮಾಣದಲ್ಲಿ ನಷ್ಟಪಡಿಸಿವೆ ಎಂದು ಕಾನ್ ಬೈಲು ಬೈಚನ ಹಳ್ಳಿ ಗ್ರಾಮದ ಅಣ್ಣುನಾಯ್ಕ ಬೆಳೆ ನಷ್ಟ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಈ ಭಾಗದಲ್ಲಿ ನಿರಂತರವಾಗಿ  ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುತ್ತಿದ್ದಾರೆ.ಕೂಡಲೆ ಅರಣ್ಯ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸುವಂತೆ ಅಣ್ಣುನಾಯ್ಕ ಹಾಗೂ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News