ಸೋಮವಾರಪೇಟೆ: ಜಲಪಾತ ವೀಕ್ಷಣೆಗೆ ಬಂದಿದ್ದ ಯುವಕ ನೀರುಪಾಲು

Update: 2018-10-09 15:25 GMT
ಸಾಂದರ್ಭಿಕ ಚಿತ್ರ

ಸೋಮವಾರಪೇಟೆ,ಅ.9: ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರೊಬ್ಬರು ನೀರು ಪಾಲಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸಕಲೇಶಪುರ ತಾಲೂಕಿನ ಅರೆಹಳ್ಳಿ ಗ್ರಾಮದ ನಿವಾಸಿ ಜಾವೇದ್(29) ಎಂಬವರು ನೀರಿನಲ್ಲಿ ಕೊಚ್ಚಿ ಹೋದವರು ಎನ್ನಲಾಗಿದೆ. ನೀರಿನ ಮಧ್ಯೆ ಕಲ್ಲುಬಂಡೆಯ ಮೇಲೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ಫಾಝಿಲ್‍ನನ್ನು ಗ್ರಾಮದ ಯುವಕರಾದ ದೇಶ್ ಮತ್ತು ತಂಡದವರು ರಕ್ಷಿಸಿದ್ದಾರೆ. 

ಅರೆಹಳ್ಳಿ ಗ್ರಾಮದ ಐವರು ಯುವಕರು ಜಲಪಾತ ವೀಕ್ಷಣೆಗೆ ಬಂದಿದ್ದರು. ಸಂಜೆ 6 ಗಂಟೆಯ ಸುಮಾರಿಗೆ ಜಲಪಾತದ ಕೆಳಗೆ ತಂತಿಬೇಲಿಯನ್ನು ದಾಟಿ ಇಬ್ಬರು ಯುವಕರು ನೀರು ಹರಿಯುವ ಹೊಳೆಯ ಕಲ್ಲುಬಂಡೆಗಳ ಮೇಲೆ ಕುಳಿತಿದ್ದರು. ಜಲಪಾತದ ಅನತಿ ದೂರದಲ್ಲಿರುವ ಮಿನಿ ಜಲವಿದ್ಯುತ್ ಘಟಕದಿಂದ ಏಕಾಏಕಿ ನೀರು ಬಿಟ್ಟ ಸಂದರ್ಭ ಜಲಪಾತದಲ್ಲಿ ನೀರಿನ ಹರಿವು ಜಾಸ್ತಿಯಾಗಿ, ಜಾವೇದ್ ಕೊಚ್ಚಿ ಹೋದರು ಎಂದು ಅವರ ಸ್ನೇಹಿತರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದು, ಜಲಪಾತದ ಸ್ಥಳದಲ್ಲಿ ನೆಟ್‍ವರ್ಕ್ ಇಲ್ಲದಿರುವುದು ಹಾಗೂ ಮಳೆ ಸುರಿಯುತ್ತಿರುವುದರಿಂದ ಗ್ರಾಮಸ್ಥರ ಕಾರ್ಯಾಚರಣೆಗೆ ತೊಡಕಾಗಿದೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News