ಹನೂರು: ಭಾರಿ ಮಳೆಗೆ ಭರ್ತಿಯಾದ ಯಾರಂಬಾಡಿ ಜಲಾಶಯ

Update: 2018-10-09 16:34 GMT

ಹನೂರು,ಅ.9: ಸೋಮವಾರ ಒಡೆಯರಪಾಳ್ಯ, ಗೆರುಮಾಳ ಪಿ.ಜಿ.ಪಾಳ್ಯ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೂಗ್ಯಂ ಗ್ರಾಪಂ ವ್ಯಾಪ್ತಿಯ ಯಾರಂಬಾಡಿ ಜಲಾಶಯ ತುಂಬಿ ಹೆಚ್ಚುವರಿ ನೀರು ಹರಿಯುತ್ತಿದೆ. 

'ಜಲಾಶಯವನ್ನು 1985 ರಲ್ಲಿ ನಿರ್ಮಿಸಲಾಗಿದ್ದು, 1215 ಹೆಕ್ಟರ್ ಪ್ರದೇಶದ ಜಮೀನುಗಳಿಗೆ ನೀರು ಒದಗಿಸುತ್ತಿದೆ. 88 ಹೆಕ್ಟರ್ ಪ್ರದೇಶ ಹೊಂದಿದ್ದು, 129 ಎಂ.ಸಿ.ಎಪ್.ಟಿ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. 2 ಕಾಲುವೆಗಳಿಂದ ಸುಮಾರು 850 ರಿಂದ 900 ಹೆಕ್ಟರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ' ಎಂದು ಸಣ್ಣ ನೀರಾವರಿ ನಿಗಮದ ಕಿರಿಯ ಅಭಿಯಂತರಾದ ಪ್ರತೀಕ್ ಹೇಳಿದ್ದಾರೆ. 

ಸಮರ್ಪಕ ಕಾಲುವೆ ನಿರ್ವಹಣೆ ಮಾಡದೆ ಕೇವಲ ಕೊಟ್ಟನಮೂಲೆ, ಜಲ್ಲಿಪಾಳ್ಯಂ ಮತ್ತು ಕೂಡಲೂರಿನ ಗ್ರಾಮಗಳ ರೈತರಿಗೆ ಮಾತ್ರ ಜಲಾಶಯದ ನೀರು ಉಪಯೋಗಕ್ಕೆ ಬರುತ್ತಿದೆ. ಹೂಗ್ಯಂ, ಕೂಡಲೂರು, ಅಂಚೆಪಾಳ್ಯ, ಪೆದ್ದನಪಾಳ್ಯ ಗ್ರಾಮಗಳಿಗೆ ಯಾವುದೇ ಉಪಯೋಗವಾಗುತ್ತಿಲ್ಲ, ಜಲಾಶಯದ ಕಾಲುವೆಗಳ ತುಂಬಾ ಹೂಳು ತುಂಬಿದ್ದು, ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ಹೂಗ್ಯಂ ಗ್ರಾಮಸ್ಥರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News