ನಾಗಮಂಗಲ: ಚುಂಚನಗಿರಿ ಮಠದ ವಸತಿ ಗೃಹಗಳಲ್ಲಿ ಸರಣಿ ಕಳ್ಳತನ; 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

Update: 2018-10-09 18:21 GMT

ನಾಗಮಂಗಲ, ಅ.9: ಆದಿಚುಂಚನಗಿರಿ ಮಠದ 10 ವಸತಿ ಗೃಹಗಳಲ್ಲಿ ಸರಣಿ ಕಳ್ಳತನ ಮಾಡಿರುವ ಕಳ್ಳರು, 10 ಲಕ್ಷ ರೂ.ಗೂ ಹೆಚ್ಚು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಬಿ.ಜಿ.ನಗರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ತಾಲೂಕಿನ ಬೆಳ್ಳೂರು ಕ್ರಾಸ್ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ಮಠದ ಆಸ್ಪತ್ರೆ, ಕಾಲೇಜು ನೌಕರರು ವಾಸವಿರುವ ವಸತಿ ಗೃಹಗಳಲ್ಲಿ ಈ ಸರಣಿ ಕಳ್ಳತನ ನಡೆದಿದೆ. ನೌಕರರು ಮನೆಗಳಿಗೆ ಬೀಗ ಜಡಿದು ಪಿತೃಪಕ್ಷದ ಹಬ್ಬಕ್ಕೆಂದು ತಮ್ಮ ಗ್ರಾಮಗಳಿಗೆ ತೆರಳಿದ್ದರು. ಮನೆಗೆ ಬೀಗ ಜಡಿದು ಹೋಗಿರುವುದನ್ನು ಗಮನಿಸಿರುವ ಕಳ್ಳರು ಮಂಗಳವಾರ ಬೆಳಗಿನ ಜಾವ ಸುಮಾರು 3ರ ಸಮಯದಲ್ಲಿ ಬೀಗ ಮುರಿದು ಒಳನುಗ್ಗಿ ಕಳವು ಮಾಡಿದ್ದಾರೆ ಎನ್ನಲಾಗಿದೆ.

10 ಮನೆಗಳಿಗೆ ನುಗ್ಗಿರುವ ಕಳ್ಳರು ಕಬ್ಬಿಣದ ಬೀರುಗಳ ಬೀಗ ಒಡೆದು 10 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾರೆ. ಮೂರು ತಿಂಗಳ ಹಿಂದೆಯೂ ಇದೇ ವಸತಿಗೃಹಗಳಲ್ಲಿ ಕಳ್ಳತನ ನಡೆದಿತ್ತು. 

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಬೆಳ್ಳೂರು ಠಾಣೆ ಪಿಎಸ್‍ಐ ಶರತ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News