ಸಹಾಯ ಕೋರಿ ಜಮಾಲ್ ಗೆಳತಿಯಿಂದ ಟ್ರಂಪ್‌ಗೆ ಮನವಿ

Update: 2018-10-10 17:20 GMT

ವಾಶಿಂಗ್ಟನ್, ಅ. 10: ಸೌದಿ ಅರೇಬಿಯದ ಪ್ರಭುತ್ವದೊಂದಿಗೆ ಭಿನ್ನಮತ ಹೊಂದಿದ್ದ ಪತ್ರಕರ್ತ ಜಮಾಲ್ ಖಶೋಗಿಗೆ ಏನಾಗಿದೆ ಎಂಬುದನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಅವರನ್ನು ಮದುವೆಯಾಗಬೇಕಾಗಿದ್ದ ಮಹಿಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮನವಿ ಮಾಡಿದ್ದಾರೆ.

ಜಮಾಲ್ ಖಶೋಗಿ ‘ಅವರ ಆದರ್ಶಗಳಿಗಾಗಿ ಹೋರಾಡುತ್ತಿದ್ದರು’ ಎಂದು ಹಾಟಿಸ್ ಸೆಂಗಿಝ್ ಹೇಳಿದ್ದಾರೆ.

ಮಂಗಳವಾರ ‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಬರೆದ ಪತ್ರವೊಂದರಲ್ಲಿ ಅವರು ಈ ಮನವಿ ಮಾಡಿದ್ದಾರೆ.

ನಾಪತ್ತೆಯಾಗಿರುವ ಸೌದಿ ಭಿನ್ನಮತೀಯ ಪತ್ರಕರ್ತ ‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.

‘‘ಟರ್ಕಿ ಸರಕಾರದ ಅಧಿಕಾರಿಗಳ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ವಿಶ್ವಾಸವಿದೆ. ಈ ಹಂತದಲ್ಲಿ, ಜಮಾಲ್‌ರ ನಿಗೂಢ ನಾಪತ್ತೆಯ ಬಗ್ಗೆ ಬೆಳಕು ಚೆಲ್ಲಲು ಅಧ್ಯಕ್ಷ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸಹಾಯ ಮಾಡಬೇಕು ಎಂದು ನಾನು ಬೇಡಿಕೊಳ್ಳುತ್ತೇನೆ’’ ಎಂದು ಸೆಂಗಿಝ್ ಹೇಳಿದ್ದಾರೆ.

‘‘ಅದೇ ವೇಳೆ, ಈ ಪ್ರಕರಣದಲ್ಲಿ ಸಂವೇದನಾಶೀಲತೆಯನ್ನು ಪ್ರದರ್ಶಿಸಿ, ಕಾನ್ಸುಲೇಟ್‌ನ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡುವಂತೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನೂ ನಾನು ಒತ್ತಾಯಿಸುತ್ತೇನೆ’’ ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News