ಸಂದರ್ಶನದಲ್ಲಿ ಪ್ರಧಾನಿ ಮೋದಿ, 15 ಲಕ್ಷದ ಬಗ್ಗೆ ಮಾತನಾಡಿಲ್ಲ: ನಿತಿನ್ ಗಡ್ಕರಿ

Update: 2018-10-10 17:29 GMT

ಹೊಸದಿಲ್ಲಿ, ಅ. 10: ‘ಬಿಜೆಪಿ 2014ರ ಚುನಾವಣೆಯಲ್ಲಿ ಭಾರೀ ಭರವಸೆಗಳನ್ನು ನೀಡಿದೆ’ ಎಂಬ ಹೇಳಿಕೆ ಕುರಿತು ಬುಧವಾರ ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈ ವರದಿ ಸುಳ್ಳು ಹಾಗೂ ಆಧಾರ ರಹಿತ. ತಾನು ಅಂತಹ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಗಡ್ಕರಿ, ನಾನು ಪ್ರಧಾನಿ ನರೇಂದ್ರ ಮೋದಿ ಅಥವಾ ಭಾರತ ಸರಕಾರದ ಬಗ್ಗೆ ಹಾಗೂ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂ. ಠೇವಣಿ ಹಾಕುವ ಬಗ್ಗೆ ಏನನ್ನೂ ಹೇಳಿಲ್ಲ ಎಂದಿದ್ದಾರೆ. ಮರಾಠಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಸಂದರ್ಭ ಗಡ್ಕರಿ ಅವರು ಮೋದಿ ಸರಕಾರ ಅವಾಸ್ತವ ಭರವಸೆಗಳ ಆಧಾರದಲ್ಲಿ ಅಧಿಕಾರಕ್ಕೆ ಬಂತು ಎಂದು ಹೇಳಿರುವುದಾಗಿ ಈ ಹಿಂದೆ ಹಲವು ವರದಿಗಳು ಪ್ರತಿಪಾದಿದ್ದವು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ಸಂದರ್ಶನದ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ ಹಾಗೂ ಸರಕಾರ ಜನರ ಕನಸು ಹಾಗೂ ಭರವಸೆಗಳನ್ನು ತನ್ನ ದುರಾಸೆಗೆ ಗುರಿಯಾಗಿಸಿದೆ ಎಂದು ಹೇಳಿದ್ದಾರೆ.

ದಿಲ್ಲಿಯ ಹೊರಗಿನ ಇಂಗ್ಲಿಶ್ ದಿನಪತ್ರಿಕೆ ತನ್ನ ಹೇಳಿಕೆ ತಿರುಚಿ ಪ್ರಕಟಿಸಿದೆ. ತಾನು ಎಂದಿಗೂ ಪ್ರಧಾನಿ ಮೋದಿ ಅವರ ಹೆಸರು, 15 ಲಕ್ಷ ರೂ. ಅಥವಾ ಯಾವುದೇ ಇತರ ವಿಚಾರಗಳನ್ನು ಹೇಳಿಲ್ಲ. ಇದು ಸಂಪೂರ್ಣ ಆಧಾರ ರಹಿತ ಸುದ್ದಿ. ಮೂಲ ಸಂದರ್ಶನ ವೀಕ್ಷಿಸುವಂತೆ ತಾನು ಮನವಿ ಮಾಡುತ್ತೇನೆ. ಈ ಕಾರ್ಯಕ್ರಮ ಮರಾಠಿಯಲ್ಲಿ ಪ್ರಸಾರವಾಗಿತ್ತು. ತನಗೆ ಆಶ್ಚರ್ಯವಾಗುತ್ತಿದೆ ರಾಹುಲ್ ಗಾಂಧಿ ಅವರು ಮರಾಠಿ ಅರ್ಥ ಮಾಡಿಕೊಳ್ಳಲು ಯಾವಾಗ ಆರಂಭಿಸಿದರು ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News