ಎರಡನೆ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ರಾಜ್ಯ ಸರಕಾರ ಸ್ಪಷ್ಟಣೆ

Update: 2018-10-11 13:55 GMT

ಬೆಂಗಳೂರು, ಅ. 11: ಎರಡನೇ ಶನಿವಾರ (ಅ.13)ದಂದು ರಜೆಯನ್ನು ರದ್ದುಪಡಿಸಿ ಅ.20ರಂದು ರಜೆ ನೀಡಲು ರಾಜ್ಯ ಸರಕಾರ ಚಿಂತಿಸಿದೆ ಎಂಬ ಸುದ್ದಿಗಳಿವೆ. ಆದರೆ, ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. 

ಹೀಗಾಗಿ ಎಂದಿನಂತೆ ಅ.13ರ ಎರಡನೇ ಶನಿವಾರ ರಜೆ ಇರುತ್ತದೆ ಹಾಗೂ ಅ.20ರ ಮೂರನೆ ಶನಿವಾರ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ರಾಜ್ಯ ಸರಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News