ಹನೂರು: ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

Update: 2018-10-11 17:51 GMT

ಹನೂರು,ಅ.11: ಪ್ರತಿಯೊಬ್ಬ ಗ್ರಾಮಸ್ಥನೂ ಸಭೆಗಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಹನೂರು ಬಿಇಒ ಟಿ. ಆರ್ ಸ್ವಾಮಿ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ 2017-18ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಾಮಾಜಿಕ ಪರಿಶೋಧನೆಯ ನೋಡಲ್ ಅಧಿಕಾರಿಯಾಗಿ ಆಗಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಮಸ್ಥರು ಕೂಡ ಈ ಯೋಜನೆ ಬಗ್ಗೆ ಅರಿತು ಸಭೆಗಳಲ್ಲಿ ಪಂಚಾಯತಿ ಆಡಳಿತ ಮಂಡಳಿಯನ್ನು ಪ್ರಶ್ನಿಸಿದಾಗ ಮಾತ್ರ ಗ್ರಾಮದ ಅಭಿವೃದ್ದಿಗೆ ಮುನ್ನುಡಿ ಬರೆದಂತಾಗುತ್ತದೆ.  ಗ್ರಾಮದಲ್ಲಿ ಹೆಚ್ಚೆಚ್ಚು ಈ ಯೋಜನೆ ಕುರಿತು ಪ್ರಚಾರ ಮಾಡಿ ಈ ಮಹತ್ತರ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಭೋದಮ್ಮ, ಉಪಾಧ್ಯಕ್ಷ ಜಪಾಮಾಲೈ, ಸದಸ್ಯ ರಾಮಲಿಂಗಮ್, ತಾಪಂ ಸಂಯೋಜಕ ಮನೋಹರ್ ಪಿಡಿಒ ಶಿವಣ್ಣ , ಕಾರ್ಯದರ್ಶಿ ನಾಗರಾಜು ಎಸ್‍ಡಿಎ ಜಗದೀಶ್ ಸೇರಿದಂತೆ ಕಚೇರಿ ಸಿಬ್ಬಂದಿ ಹನೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾನ್‍ಬ್ರೀಟೋ , ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News