ಸಚಿವ ಮಹೇಶ್ ರಾಜೀನಾಮೆ ಮೈತ್ರಿ ಸರಕಾರ ಪತನದ ಮೊದಲ ಹೆಜ್ಜೆ: ಜಗದೀಶ್ ಶೆಟ್ಟರ್

Update: 2018-10-12 13:59 GMT

ಹುಬ್ಬಳ್ಳಿ, ಅ. 12: ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್ ರಾಜೀನಾಮೆ, ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿ ಬೀಳುವುದಕ್ಕೆ ಇದು ಮೊದಲ ಹೆಜ್ಜೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಯಾವ ಕ್ಷಣದಲ್ಲಿ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆಯಾದ ಕೂಡಲೇ ಸರಕಾರ ಬಿದ್ದರೂ ಅಚ್ಚರಿಪಡುವಂತಿಲ್ಲ ಎಂದು ನುಡಿದರು.

ಜನಾದೇಶ ವಿರುದ್ಧವಾಗಿ ರಾಜ್ಯದಲ್ಲಿ ಸರಕಾರ ಆಡಳಿತ ನಡೆಸುತ್ತಿದ್ದು, ಮೈತ್ರಿ ಸರಕಾರದ ಸಚಿವರು, ಶಾಸಕರು ಹಾಗೂ ಮುಖಂಡರ ನಡುವೆ ಹೊಂದಾಣಿಕೆ ಇಲ್ಲ. ರಾಜ್ಯದಲ್ಲಿ ಒಂದು ಕೆಟ್ಟ ಸರಕಾರವಿದೆ ಎನ್ನುವುದಕ್ಕೆ ಸಚಿವ ಪುಟ್ಟರಂಗ ಶೆಟ್ಟಿ ಹಾಗೂ ಮಹೇಶ ನಡುವಿನ ಜಗಳ ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.

ಮೈತ್ರಿ ಸರಕಾರ ರಚನೆಯಾದ ದಿನದಿಂದಲೂ ಮಹೇಶ್‌ಗೆ ಹೊಂದಾಣಿಕೆಯೇ ಇರಲಿಲ್ಲ. ಸರಕಾರ ಅಥವಾ ಮುಖ್ಯಮಂತ್ರಿ ಅವರನ್ನು ತೆಗೆದು ಹಾಕಿಲ್ಲ. ಬದಲಿಗೆ ಅವರೇ ರಾಜೀನಾಮೆ ನೀಡಿ ಮನೆಗೆ ಹೋಗುತ್ತಾರೆಂದರೆ ಅದು ದೊಡ್ಡ ಮುನ್ಸೂಚನೆ. ಇದು ರಾಷ್ಟ್ರ ರಾಜಕಾರಣಕ್ಕೂ ದಿಕ್ಸೂಚಿ ಎಂದು ಶೆಟ್ಟರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News