ಮೈಸೂರು: ದಸರಾ ಹೆಲಿ ರೈಡ್ ಗೆ ಸಚಿವ ಜಿ.ಟಿ.ದೇವೇಗೌಡ ಚಾಲನೆ

Update: 2018-10-13 17:28 GMT

ಮೈಸೂರು,ಅ.13: ನಾಡ ಹಬ್ಬ ಮೈಸೂರು ದಸರಾ 2018ರ ಪ್ರಯುಕ್ತ ಹೆಲಿಕಾಪ್ಟರ್ ರೈಡ್ ಗೆ ಸಚಿವ ಜಿ.ಟಿ. ದೇವೇಗೌಡ ಶನಿವಾರ ಹಸಿರು ನಿಶಾನೆ ತೋರಿಸಿದರು.

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ  ಚಾಲನೆ ನೀಡಲಾಗಿದ್ದು, ಸಚಿವ ಜಿ.ಟಿ.ದೇವೇಗೌಡರಿಗೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸಾಥ್ ನೀಡಿದರು.

ಚಾಲನೆ ನೀಡಿದ ಬಳಿಕ ಕುಟುಂಬ ಸಮೇತ ಜಿ.ಟಿ.ದೇವೇಗೌಡ ಅವರು ಜಾಲಿ ರೈಡ್ ನಲ್ಲಿ ಪಾಲ್ಗೊಂಡರು. ಪತ್ನಿ ಲಲಿತ, ಪುತ್ರ ಹರೀಶ್, ಸೊಸೆ ವರ್ಷ ಹಾಗೂ ಮೊಮ್ಮಕ್ಕಳೊಂದಿಗೆ ಜಾಲಿ ರೈಡ್ ನಲ್ಲಿ ಪಾಲ್ಗೊಂಡರು. ನಂತರ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ದಸರಾ ಮುಕ್ತಾಯದವರೆಗೂ ಹೆಲಿಕಾಪ್ಟರ್ ಜಾಲಿ ರೈಡ್ ನಡೆಯಲಿದ್ದು, ಜಾಲಿ ರೈಡ್ ಮಾಡಲು ಓರ್ವ ವ್ಯಕ್ತಿಗೆ 2400 ರೂ ದರ ನಿಗದಿಪಡಿಸಲಾಗಿದೆ. ಹೆಲಿಕಾಪ್ಟರ್ ನಲ್ಲಿ 8 ನಿಮಿಷಗಳ ಕಾಲ ಮೈಸೂರು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News