ಸಮಸಮಾಜದ ನಿರ್ಮಾಣ ವೀರಶೈವ ಮಹಾಸಭಾದ ಗುರಿ: ಈಶ್ವರ್ ಖಂಡ್ರೆ

Update: 2018-10-14 12:55 GMT

ಚಿಕ್ಕಮಗಳೂರು, ಅ.14: ಸಮಸಮಾಜದ ನಿರ್ಮಾಣವೇ ವೀರಶೈವ ಮಹಾಸಭಾದ ಉದ್ದೇಶ ಎಂದು ಶಾಸಕ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ತಿಳಿಸಿದರು. 

ರವಿವಾರ ಅಖಿಲ ಭಾರತ ವೀರಶೈವ ಮಹಾಸಭಾದಿಂದ ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪಿಯುಸಿ, ಎಸೆಸೆಲ್ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದ ಶಿವಶರಣರು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಹೇಳಿರುವಂತೆ ಜಾತಿ, ಧರ್ಮ ಮೀರಿದ ಸಮಸಮಾಜ ನಿರ್ಮಾಣಕ್ಕೆ ಅಖಿಲ ಭಾರತ  ವೀರಶೈವ ಮಹಾಸಭಾ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವೀರಶೈವ ಧರ್ಮಕ್ಕೆ ವಿಶಿಷ್ಟ ಸ್ಥಾನವಿದೆ. ಸಂಸ್ಕೃತಿ ಇದೆ. ಸುರ್ಧೀಘ ಪರಂಪರೆ ಇದೆ. ಮಾನವ ಧರ್ಮದಿಂದ ವಿಶ್ವಕ್ಕೆ ಶಾಂತಿ, ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸಮಾಜ ವೀರಶೈವ ಲಿಂಗಾಯತ ಸಮುದಾಯ. 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ, ವಿಶ್ವಕ್ಕೆ ಮಾದರಿ ವಚನ ಸಾಹಿತ್ಯ ನೀಡಿದ್ದು, ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲರೂ ಸರಿಸಮಾನವಾಗಿ ಬೆಳೆಬೇಕೆಂದು ಹೇಳಿದ್ದು ವೀರಶೈವ ಸಮಾಜ ಎಂದು ಬಣ್ಣಿಸಿದರು. 

ಸಮಾಜದಲ್ಲಿರುವ ಸಂಘ ಸಂಸ್ಥೆಗಳು ಮಠಮಾನ್ಯಗಳು ದೇಶಕ್ಕಾಗಿ ಸಮಾಜಕ್ಕಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರವಾದ ಕೊಡುಗೆ ನೀಡಿದೆ. ಎಲ್ಲದನ್ನೂ ಅಪ್ಪಿಕೊಂಡು ಒಪ್ಪಿಕೊಂಡು ಸಮಾಜ ವೀರಶೈವ ಸಮಾಜ ಎಂದ ಅವರು, ಪ್ರತಿಯೊಂದು ಸಮುದಾಯವೂ ತನ್ನದೇ ಆದ ಮಠಮಾನ್ಯಗಳ ಮೂಲಕ  ಧರ್ಮ ಪ್ರಚಾರದ ಮಾಡುತ್ತೀದೆ. ಅದೇರೀತಿ ವೀರಶೈವ ಸಮಾಜವೂ ಧರ್ಮಪ್ರಚಾರದ ಜೊತೆಗೆ ಎಲ್ಲಾ ಯುವಕ, ಯುವತಿಯರಿಗೆ ಸಂಸ್ಕಾರ ಬೆಳೆಸಿ, ಜ್ಞಾನ, ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಕೊಡುಗೆಯನ್ನು ವೀರಶೈವ ಲಿಂಗಾಯುತ ಸಮುದಾಯ ನೀಡಿದೆ ಎಂದು ಪ್ರಶಂಸಿದ ಅವರು,  ಯುವಕ, ಯುವತಿಯರು ದೇಶದ ಸಂಪನ್ಮೂಲ, ದೇಶ ವಿದೇಶದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಕ್ಷೇತ್ರ, ರಾಜಕೀಯ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಕಲುಷಿತಗೊಳ್ಳುತ್ತಿದೆ. ಮಾನವೀಯ ಮೌಲ್ಯ, ನೈತಿಕ ಮೌಲ್ಯ ಅದಃಪತನವಾಗುತ್ತಿವೆ. ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ರಾಷ್ಟ್ರದ ಸಂಸ್ಕøತಿ ಅನುಕರಣೆ ಮಾಡಿ ಯುವ ಸಮುದಾಯ ದಾರಿ ತಪ್ಪುತ್ತಿರುವುದನ್ನು ನೋಡುತ್ತಿದ್ದೇವೆ. ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.  ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಆಧಾರಸ್ಥಂಭವಾಗಿರುವ ಯುವ ಜನತೆಯ ಬಹಳಷ್ಟು ಜವಬ್ದಾರಿ ಇದೆ. ನಿಮ್ಮಲ್ಲಿ ಮಾನವೀಯ ಮೌಲ್ಯ, ನೈತಿಕ ಮೌಲ್ಯ  ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಮಾನವೀಯ ಮೌಲ್ಯ, ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕಾದರೇ ರೇಣುಕಾಚಾರ್ಯರು ಹೇಳಿರುವ ತತ್ವ ಆದರ್ಶಗಳು, 12ನೇ ಶತಮಾನದಲ್ಲಿ ಶಿವಶರಣರು ನೀಡಿರುವ ವಚನ ಸಾಹಿತ್ಯವನ್ನು ಅಭ್ಯಾಸ ಮಾಡುವ ಮೂಲಕ ಯುವ ಜನತೆ ಸಂಸ್ಕಾರ, ಒಳ್ಳೆಯ ವಿಚಾರ, ಉತ್ತಮ ದಾರಿಯಲ್ಲಿ ನಡೆಯಬಹುದು. ಸಮಾಜಕ್ಕೆ ದೊಡ್ಡ ಕೊಡುಗೆ ನೀಡಲು ಸಾಧ್ಯ ಎಂದರು. 

ಸಮಾರಂಭದ ದಿವ್ಯಸಾನಿಧ್ಯವನ್ನು ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.  ಅಖಿಲ ಭಾತರ ವೀರಶೈಮ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಎಂ. ಲೋಕೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವೀರಶೈವ ಮಹಾಸಭಾದ ಎ.ಎಸ್. ದಿವಾಕರ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ಈಶ್ವರಪ್ಪ ಕೋಟೆ, ಪಿ.ಚಂದ್ರಮೌಳಿ, ರಾಷ್ಟ್ರೀಯ ಕಾಂರ್ಯದರ್ಶಿ ರೇಣುಕ ಪ್ರಸನ್ನ, ನಟರಾಜ್ ಸಾಗರನಹಳ್ಳಿ, ತರೀಕೆರೆ ಕ್ಷೇತ್ರದ ಮಾಜಿ ಶಾಸಕ ಎಸ್.ಎಂ. ನಾಗರಾಜ್, ಪ್ರಗತಿಪರ ಕೃಷಿಕ ಚಂದ್ರಶೇಖರ್ ನಾಣಾಪುರ, ಸಾಹಿತಿ ರವೀಶ್‍ಬಸಪ್ಪ, ವೀರಶೈವ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಓಂಕಾರಸ್ವಾಮಿ ಸೇರಿದಂತೆ ಅನೇಕರು ಇದ್ದರು. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News