ಬ್ರೇಕ್ ಫೇಲ್ ಆಗಿ ಅಪಘಾತ: ಜೀಪ್ ನಲ್ಲಿದ್ದ ನಾಲ್ವರು ಮೃತ್ಯು; 6 ಮಂದಿಗೆ ಗಾಯ

Update: 2018-10-15 10:27 GMT

ಉತ್ತರಕಾಶಿ, ಅ.15: ಬ್ರೇಕ್ ಫೇಲ್ ಆಗಿ ಜೀಪೊಂದು ಅಪಘಾತಕ್ಕೀಡಾದ ಪರಿಣಾಮ 4 ಮಂದಿ ಮೃತಪಟ್ಟು, 6 ಮಂದಿ ಗಾಯಗೊಂಡ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಂಭವಿಸಿದೆ.

ಇಲ್ಲಿನ ಜೋಗಟ್-ಚಿನ್ಯಾಲಿಸೌರ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಜೀಪ್ ನಲ್ಲಿ 10 ಮಂದಿಯಿದ್ದರು ಎನ್ನಲಾಗಿದೆ. ಬ್ರೇಕ್ ಫೇಲ್ ಆದದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News