ಚಿಕ್ಕಮಗಳೂರು: ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆ

Update: 2018-10-15 12:25 GMT

ಚಿಕ್ಕಮಗಳೂರು,ಅ.15: ಜಿಲ್ಲಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಂ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಟಿ.ರಾಜಶೇಖರ್, ಗೌರವ ಕಾರ್ಯದರ್ಶಿಯಾಗಿ ಐ.ಎಸ್.ಉಮೇಶ್‍ಚಂದ್ರ ಅವರು ಅವಿರೋಧವಾಗಿ ಆಯ್ಕೆಯಾದರು.

ಸೋಮವಾರ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸಂಘದ ಸದಸ್ಯರ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‍ಕುಮಾರ್ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಸಮಾಜದ ಗುರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆದು ಸಂಘದ ಸದಸ್ಯರುಗಳ ಸಲಹೆ ಮತ್ತು ಮಾರ್ಗದರ್ಶನಗಳಿಗೆ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನಮ್ಮ ಅವದಿಯಲ್ಲಿ ಉತ್ತಮ ಕೆಲಸಗಳು ಆಗಿವೆ. ನಮ್ಮ ಸಂಸ್ಥೆಯನ್ನು ಬೆಳೆಸಲು ಸೇವಾ ಮನೋಭಾವನೆಯಿಂದ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಯಾವುದೇ ರಾಜಕೀಯ ಮಾಡದೆ ಸಂಸ್ಥೆಯ ಏಳಿಗೆಗೆ ಪ್ರತಿಯೋಬ್ಬರೂ ಶ್ರಮಿಸಬೇಕು ಎಂದರು.

ನೂತನ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್ ಮಾತನಾಡಿ, ನಾನು 5ನೇ ಬಾರಿ ಸಂಘಕ್ಕೆ ಆಯ್ಕೆಯಾಗಿ ಬಂದಿದ್ದೇನೆ. ನನ್ನನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ನಿರ್ದೇಶಕರಿಗೆ ನಂಬಿಕೆಗೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಉಪಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ನಮಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತೇವೆ. ಗುರು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ಉತ್ತಮ ಕೆಲಸ ಮಾಡುತ್ತೇವೆ ಎಂದರು

ಸಂಘದ ಗೌರವ ಕಾರ್ಯದರ್ಶಿ ಐ.ಎಸ್.ಉಮೇಶ್‍ಚಂದ್ರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಯದರ್ಶಿ ಅನಂತೇಗೌಡ, ಉಪಾಧ್ಯಕ್ಷ ಕೆ.ಎಸ್.ನಾರಾಯಣಗೌಡ, ಮಾಜಿ ಅಧ್ಯಕ್ಷ ಹಳಸೆಶಿವಣ್ಣ, ಐ.ಎಂ.ಮಹೇಶ್‍ಗೌಡ, ಬಿ.ಎಲ್.ಸಂದೀಪ್. ನಿರ್ದೇಶಕ ಪ್ರದೀಪ್‍ಕುಮಾರ್. ಎಂ.ಸಿ.ಪ್ರಕಾಶ್. ಗಂಧದ ಎಂ.ಡಿ.ಕೃಷ್ಣೇಗೌಡ, ಎಸ್.ಡಿ.ಮನೋಜ್. ಜಿ.ಎಸ್.ಚಂದ್ರಪ್ಪ. ಕೆ.ಆರ್.ರಾಜೇಗೌಡ, ಎಂ.ಬಿ.ಆನಂದ್, ಡಿ.ಎಲ್.ವಸಂತಕುಮಾರಿ, ಡಿ.ಎಲ್.ರಾಜಶ್ರೀ, ಸವಿತಾರಮೇಶ್, ಕೆ.ಕೆ.ವೆಂಕಟೇಶ್, ಎಂ.ಕೆ.ದಿನೇಶ್, ಕೆ.ಎಸ್.ಮೋಹನ್‍ಕುಮಾರ್, ಯು.ಎಸ್.ಆದರ್ಶ್, ಹೆಚ್.ಎಂ.ಶ್ಯಾಮ್, ಎಂ.ಎಸ್.ವಿಕ್ರಾಂತ್, ಸಿಇಒ.ಕುಳ್ಳೇಗೌಡ. ವ್ಯವಸ್ಥಾಪಕ ರಾಜು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News