ಭ್ರಷ್ಟಾಚಾರದಲ್ಲಿ ಶ್ರೀರಾಮಲು ಕಲಾಕಾರ: ಎಸ್.ಆರ್.ಹಿರೇಮಠ್

Update: 2018-10-15 14:55 GMT

ಹುಬ್ಬಳ್ಳಿ, ಅ.15: ಅಕ್ರಮ ಗಣಿಗಾರಿಕೆಯಲ್ಲಿ ಶಾಸಕ ಶ್ರೀರಾಮಲುವಿನ ಪಾತ್ರವಿದ್ದರೂ ಹಗರಣದಲ್ಲಿ ಸಿಲುಕದಂತೆ ಎಚ್ಚರ ವಹಿಸಿದ ಕಲಾಕಾರ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮಲು ಗಣಿ ಹಗರಣದಲ್ಲಿ ಮಾಜಿ ಜನಾರ್ದನ ರೆಡ್ಡಿಯನ್ನು ಮುಂದೆಬಿಟ್ಟು ಕೋಟ್ಯಂತರ ರೂ.ವನ್ನು ಅಕ್ರಮವಾಗಿ ಗಳಿಸಿದ್ದಾರೆ. ಆದರೂ ಕಾನೂನಿನ ಕುಣಿಕೆಗೆ ಸಿಲುಕಿಲ್ಲ. ಅಕ್ರಮ ಹಣದಿಂದಲೆ 100 ಕೋಟಿ ರೂ.ವೆಚ್ಚದಲ್ಲಿ ಮನೆ ಕಟ್ಟಿಕೊಂಡು ಮೆರೆಯುತ್ತಿದ್ದಾರೆ ಎಂದು ಆರೋಪಿಸಿದರು.

ಹಣ ಹಾಗೂ ಅಧಿಕಾರದ ದಾಹಕ್ಕಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದು, ಪುನಃ ಚುನಾವಣೆ ನಡೆಸಿ ಸಾರ್ವಜನಿಕರ ಹಣ ಪೋಲು ಮಾಡುವಂತಹ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ. ಇದು ಮತದಾರರಿಗೆ ಮಾಡುವ ಅವಮಾನವಾಗಿದೆ. ಹೀಗಾಗಿ ಜನತೆ ಉಪಚುನಾವಣೆಯಲ್ಲಿ ಜನವಿರೋಧಿ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಹೇಳಿದರು.

ಅಕ್ರಮ ನೇಮಕಾತಿ: 2014ರಲ್ಲಿ ಅಕ್ರಮವಾಗಿ ನೇಮಕಗೊಂಡ ಆರೋಪ ಎದುರಿಸುತ್ತಿರುವ 63 ಸಹಾಯಕ ಸರಕಾರಿ ಅಭಿಯೋಜಕರು ಮತ್ತು ಸಹಾಯಕ ಸರಕಾರಿ ಪ್ಲೀಡರ್‌ಗಳನ್ನು ಅಮಾನತು ಮಾಡಬೇಕು ಹಾಗೂ ಈ ಅಕ್ರಮಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News