ಮುಂಬೈ: 90 ನಿಮಿಷಗಳಲ್ಲಿ ಆರು ಫ್ಲಾಟ್‌ಗಳಲ್ಲಿ ಲೂಟಿ ಮಾಡಿದ ದರೋಡೆಕೋರರು

Update: 2018-10-16 07:07 GMT

ಮುಂಬೈ, ಅ.16: ಏಳು ಮಂದಿ ಮುಸುಕುಧಾರಿ ದರೋಡೆಕೋರರು ಅಂಧೇರಿ(ಪೂರ್ವ)ಉಪನಗರದ ಮರೋಲಿಯಲ್ಲಿ ವಸತಿ ಸಂಕೀರ್ಣದ ಮೂರು ಕಟ್ಟಡದಲ್ಲಿದ್ದ ಆರು ಮುಚ್ಚಿದ ಫ್ಲಾಟ್‌ಗಳ ಬೀಗ ಮುರಿದು ನಗ-ನಗದು ಹಾಗೂ ಬೆಲೆಬಾಳುವ ವಾಚ್‌ಗಳನ್ನು ಲೂಟಿಗೈದ ಘಟನೆ ನಡೆದಿದೆ.

ಮನೆಯೊಳಗಿದ್ದ ನಾಯಿ ಬೊಗಳಿದ ಕಾರಣ ಏಳನೇ ಫ್ಲಾಟ್‌ನ ದರೋಡೆ ಯತ್ನ ವಿಫಲವಾಗಿದೆ.

ಆಗಸ್ಟ್ ಬಳಿಕ ಮೂರನೇ ಬಾರಿ ಸರಣಿ ಕಳ್ಳತನ ನಡೆದಿರುವ ಕಾರಣ ವಿಜಯ ನಗರ ಕಾಂಪ್ಲೆಕ್ಸ್‌ನಲ್ಲಿ ಆತಂಕದ ವಾತಾವರಣ ನೆಲೆಸಿದೆ.ಒಂದೇ ಗ್ಯಾಂಗ್ ಪದೇ ಪದೇ ದರೋಡೆ ಮಾಡುತ್ತಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಎಂದು ಕಟ್ಟಡದ ನಿವಾಸಿಗಳು ಆರೋಪಿಸಿದ್ದಾರೆ.

ರವಿವಾರ ಏಳು ಮಂದಿ ದರೋಡೆಕೋರರು ರಾತ್ರಿ 2.30ರ ಸುಮಾರಿಗೆ ಹೌಸಿಂಗ್ ಕಾಂಪ್ಲೆಕ್ಸ್‌ಗೆ ಪ್ರವೇಶಿಸಿ, 4 ಗಂಟೆಗೆ ವಾಪಸಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇವಲ 90 ನಿಮಿಷಗಳಲ್ಲಿ ಮುಚ್ಚಿದ ಫ್ಲಾಟ್‌ಗಳನ್ನು ಗುರಿಯಾಗಿಸಿ ದರೋಡೆಗೈದ ಕಳ್ಳರು ಕರಾಮತ್ತು ತೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News