'ದಿ ವಿಲನ್' ಸಿನೆಮಾಗಾಗಿ ಗೋಹತ್ಯೆ?

Update: 2018-10-20 13:46 GMT

ಬೆಂಗಳೂರು, ಅ.20: ಇತ್ತೀಚಿಗೆ ತೆರೆ ಕಂಡಿರುವ ಕನ್ನಡದ 'ದಿ ವಿಲನ್' ಸಿನಿಮಾದ ಯಶಸ್ವಿಗಾಗಿ ಕೋಣವೊಂದನ್ನು ಬಲಿ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯುವಕರ ಗುಂಪು ಸಾರ್ವಜನಿಕವಾಗಿಯೇ ಕೋಣವನ್ನು ಬಲಿಕೊಟ್ಟು, ಅದರ ರಕ್ತವನ್ನು ವಿಲನ್ ಸಿನೆಮಾದ ಪೋಸ್ಟರ್ ಗೆ ಸುರಿಯುತ್ತಿರುವ ದೃಶ್ಯ ಈ ವಿಡಿಯೋದಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಬಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಒಂದೆಡೆ ಸಂಘಪರಿವಾರವು ಗೋಹತ್ಯೆಯ ವಿರುದ್ಧ ಧ್ವನಿ ಎತ್ತುತ್ತಿರುವ ಸಂದರ್ಭದಲ್ಲೇ ಸಿನೆಮಾದ ಯಶಸ್ವಿಗಾಗಿ ಕೋಣ ಬಲಿ ನೀಡಿದ ಘಟನೆ ಚರ್ಚೆಗೆ ಗ್ರಾಸವಾಗಿದೆ. 

ಇನ್ನು, ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ತಿಳಿದು ಬಂದಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News