ರಾಜ್ಯ ಮಟ್ಟದ ಟೆಕ್ವಾಂಡೊ: ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಚಿನ್ನ, ಕಂಚಿನ ಸಾಧನೆ

Update: 2018-10-21 12:56 GMT

ಮಡಿಕೇರಿ, ಅ.21: ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ಟೆಕ್ವಾಂಡೊ ಸಂಸ್ಥೆಯ ಆಶ್ರಯದಲ್ಲಿ ನಡೆದ 36ನೇ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್‍ಶಿಪ್‍ನ  ಕೆಡೆಟ್ ವಿಭಾಗದಲ್ಲಿ ಸ್ಪರ್ಧಿಸಿದ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನದ ಮೂಲಕ ಚಿನ್ನ ಮತ್ತು ಕಂಚಿನ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ಅ.14 ರಿಂದ 17ರವರೆಗೆ ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ಕೆಡೆಟ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಟೆಕ್ವಾಂಡೊ ಚಾಂಪಿಯನ್‍ಶಿಪ್ ನಡೆಯಿತು. ಇದರಲ್ಲಿ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಕೆಡೆಟ್ ವಿಭಾಗದಲ್ಲಿ ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ.

ಬೈಲೇರ ಪ್ರೊನಿಕ್ಷಾ ವಿಶ್ವನಾಥ್ ಅವರು ಚಿನ್ನದ ಪದಕವನ್ನು ಪಡೆದು ಅತ್ಯಪೂರ್ವ ಸಾಧನೆ ಮಾಡಿದ್ದು, ಸೂಸೆನ್ ಅನ್ವರ್ ಭಾಷಾ, ತಾನಿಯಾ ಭವಾನಿ ಶಂಕರ್ ಮತ್ತು ಪೂಜಾರಿರ ಬೃಹತ್ ಬೋಪಯ್ಯ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಂಡೀರ ಮೌರ್ಯ ಸುಧಾಕರ್ ಮತ್ತು ತೇಜಸ್ ವೇಲಾಯುಧನ್ ಸ್ಪರ್ಧಿಸಿದ್ದರು.

ಚಿನ್ನದ ಪದಕದ ಸಾಧನೆ ಮಾಡಿರುವ ಬೈಲೇರ ಪ್ರೊನಿಕ್ಷಾ ವಿಶ್ವನಾಥ್ ಅವರು ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆಯನ್ನು ಪಡೆದುಕೊಂಡಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಗೌರವವನ್ನು ಪಡೆದಿದ್ದಾರೆಂದು ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ. ಲೋಕೇಶ್ ರೈ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News