ಕಾಡಿನತ್ತ ತೆರಳಿದ ದಸರಾ ಗಜಪಡೆಗಳು: ಜಿಲ್ಲಾಡಳಿತದಿಂದ ಗೌರವಧನದ ಚೆಕ್ ವಿತರಣೆ

Update: 2018-10-21 17:13 GMT

ಮೈಸೂರು,ಅ.21: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಯಶಸ್ವಿಗೊಳಿಸಿದ ಗಜಪಡೆಗಳನ್ನು ಬೀಳ್ಕೊಡಲಾಯಿತು.

ಅರಮನೆ ಒಳಾವರಣದಲ್ಲಿ ರವಿವಾರ ಕ್ಯಾಪ್ಟನ್ ಅರ್ಜುನ, ಬಲರಾಮ, ಗೋಪಿ, ಚೈತ್ರ, ವರಲಕ್ಷ್ಮಿ, ದ್ರೋಣ, ಧನಂಜಯ, ಕಾವೇರಿ, ಅಭಿಮನ್ಯು, ಪ್ರಶಾಂತ, ವಿಜಯ, ವಿಕ್ರಮ ಸೇರಿದಂತೆ ಒಟ್ಟು 12 ಆನೆಗಳನ್ನು ಸಾಲಾಗಿ ನಿಲ್ಲಿಸಿ ಕಬ್ಬು, ಬೆಲ್ಲ, ತೆಂಗಿನಕಾಯಿ ನೀಡಿ ಪೂಜೆ ಸಲ್ಲಿಸಲಾಯಿತು. ನಂತರ ಮಾವುತ ಹಾಗೂ ಕಾವಾಡಿ ಕುಟುಂಬಗಳಿಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಜಿಲ್ಲಾಡಳಿತದಿಂದ ಗೌರವ ಧನದ ಚೆಕ್ ನೀಡಿದರು.
ಕಳೆದ ಎರಡು ತಿಂಗಳಿನಿಂದ ಗಜಪಡೆಗಳು, ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರು ಕಾಡು ಬಿಟ್ಟು ನಾಡಿನಲ್ಲಿ ಕಾಲ ಕಳೆದಿದ್ದರು, ಅಷ್ಟೂ ದಿನವು ಸಂತೋಷದಿಂದ ಕಾಲ ಕಳೆದಿದ್ದ ಪುಟಾಣಿ ಮಕ್ಕಳು ತಮ್ಮ ಊರಿಗೆ ತೆರಳಲು ಉತ್ಸುಕರಾಗಿದ್ದರು. ಹಲವು ಸಂಘ ಸಂಸ್ಥೆಗಳವರು ಮಕ್ಕಳು ಸೇರಿದಂತೆ ಕಾವಾಡಿಗಳ ಕುಟುಂಬದವರಿಗೆ ಬೆಡ್ ಶೀಟ್ ಮತ್ತು ಬಟ್ಟೆಗಳನ್ನು ನೀಡಿ ಶುಭಹಾರೈಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್, ಪಶು ವೈದ್ಯಾದಿಕಾರಿ ಡಾ.ನಾಗರಾಜು ಸೇರಿದಂತೆ ಅರಣ್ಯ ಇಲಾಖೆ ಆಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News