ಸುಂಟಿಕೊಪ್ಪ ಎಸ್ಸೆಸ್ಸೆಫ್ ವತಿಯಿಂದ ಯುನಿಟ್ ಸಮ್ಮೇಳನ
Update: 2018-10-23 23:33 IST
ಮಡಿಕೇರಿ,ಅ. 23: ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸುಂಟಿಕೊಪ್ಪ ಶಾಖೆ ವತಿಯಿಂದ 'ಯೌವ್ವನ ಮರೆಯಾಗುವ ಮುನ್ನ' ಎಂಬ ಘೋಷನೆಯಡಿ ಯೂನಿಟ್ ಸಮ್ಮೇಳನ ನಡೆಯಿತು.
ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಖತೀಬ್ ರಫೀಕ್ ಸಅದಿಯವರು ಅಧ್ಯಕ್ಷತೆ ವಹಿಸಿದರು. ಕಮರುದ್ದಿನ್ ಅನ್ವಾರಿ ಅಸ್ಸಖಾಫಿಯವರ ಬುರ್ದಾ ಮಜ್ಲಿಸ್ ನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮುಹಮ್ಮದ್ ಶಾಫೀ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿರವರು ಪ್ರಸ್ತಾವಿಕ ಭಾಷಣ ಮಾಡಿದರು. ಕೊಡಗು ಜಿಲ್ಲಾ ಪಂ. ಸದಸ್ಯ ಅಬ್ದುಲ್ ಲತೀಫ್ ರವರು ಮಾತನಾಡಿ, ಎಸ್ಸೆಸ್ಸಫ್ ಸಂಘಟನೆಯು ಯುವಕರಿಗೆ ನೈತಿಕ ಬದುಕಿನೊಂದಿಗೆ ಸಂಪೂರ್ಣ ಧಾರ್ಮಿಕ ಚೌಕಟ್ಟಿನೊಳಗೆ ಬದುಕಲು ಪ್ರೇರಣೆಯಾಗುತ್ತಿದೆ ಎಂದರು.
ಸಮ್ಮೇಳನದ ಧ್ಯೇಯ ವಾಕ್ಯವಾದ 'ಯೌವ್ವನ ಮರೆಯಾಗುವ ಮುನ್ನ' ಎಂಬ ವಿಷಯದ ಕುರಿತು ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಭಾಷಣ ಮಾಡಿದರು.