×
Ad

ಚಾಮರಾಜನಗರ: ಕಾರು ಹರಿದು ಯುವತಿ ಸಾವು

Update: 2018-10-24 17:52 IST

ಚಾಮರಾಜನಗರ,ಅ.24: ತಾಲೂಕಿನ ಮರಿಯಾಲ ಗ್ರಾಮದ ಬಸ್ ನಿಲ್ದಾಣದ ಬಳಿ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

ಯಳಂದೂರು ತಾಲೂಕಿನ ಅಗರ ಗ್ರಾಮದ ಲತಾ (24) ಮೃತರು. ಮರಿಯಾಲದ ಜೆಎಧಿಸ್‍ಎಸ್ ರುಡ್‍ಸೆಟ್ ಸಂಸ್ಥೆ ಉದ್ಯೋಗಿಯಾಗಿದ್ದು, ಕೆಲಸ ಮುಗಿಸಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ನಗರಕ್ಕೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು ಸ್ಥಳದಲ್ಲೇ ಅಸುನೀಗಿದರು.

ಎಎಸ್ಪಿ ಗೀತಾ ಪ್ರಸನ್ನ, ಡಿವೈಎಸ್ಪಿ ಜಯಕುಮಾರ , ಸಂಚಾರ ಠಾಣೆ ಎಸ್ ಐ ದೀಪಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನನ್ನು ವಶಕ್ಕೆ ತಗೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News