ಚಾಮರಾಜನಗರ: ಗರ್ಭಿಣಿ ಮಹಿಳೆ ಅನುಮಾನಾಸ್ಪದ ಸಾವು

Update: 2018-10-24 12:25 GMT

ಚಾಮರಾಜನಗರ,ಅ.24: ಗರ್ಭಿಣಿ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಳತ್ತೂರು ಗ್ರಾಮದ ಪ್ರಿಯಾ (20) ಮೃತಪಟ್ಟ ಮಹಿಳೆ. ಈಕೆ 1 ವರ್ಷದ ಹಿಂದೆ ಮಣಗಳ್ಳಿಯ ರಾಚಪ್ಪ ಎಂಬಾತನೊಂದಿಗೆ ಪ್ರೀತಿಸಿ ಹನೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದು, 5 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

ಪ್ರಿಯಾ ಅಸಹಜವಾಗಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿ ಆಕೆಯ ಪತಿ, ಅತ್ತೆ, ಮಾವನ ವಿರುದ್ಧ ಮೃತಳ ತಂದೆ ಹನೂರು ಠಾಣೆಗೆ ದೂರು ನೀಡಿದ್ದಾರೆ. ಸದ್ಯ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿ, ಪತಿ ರಾಚಪ್ಪನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News