ಹನೂರು: ಗಾಂಜಾ ಸಾಗಿಸುತ್ತಿದ್ದ ಮಹಿಳೆಯ ಬಂಧನ
Update: 2018-10-24 20:27 IST
ಹನೂರು,ಅ.24: ಗಾಂಜಾ ಸಾಗಿಸುತ್ತಿದ್ದ ಆರೋಪಿ ಮಹಿಳೆಯನ್ನು ತಾಲೂಕಿನ ಅರ್ಧನಾರಿಪುರ ಹಾಗೂ ಗುರುಮಲ್ಲಪ್ಪನದೂಡ್ಡಿ ರಸ್ತೆಯ ಮಾರ್ಗಮಧ್ಯೆ ಹನೂರು ಪೋಲಿಸರು ಬಂಧಿಸಿದ್ದಾರೆ.
ತಾಲೂಕಿನ ಅರ್ಧನಾರಿಪುರ ಗ್ರಾಮದ ತಾಯಮ್ಮ ಬಂಧಿತ ಆರೋಪಿ. ಡಿವೈಎಸ್ಪಿ ಪುಟ್ಟಮಾದಯ್ಯ ಮಾರ್ಗದರ್ಶನದಲ್ಲಿ ಹನೂರು ಆರಕ್ಷಕ ನಿರೀಕ್ಷಕ ಮೋಹಿತ್ ಸಹದೇವ್‍ರವರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸುಮಾರು 700 ಗ್ರಾಂ ಗಾಂಜಾವನ್ನು ವಶಪಡಿಸಿ, ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾಳಿ ವೇಳೆ ಸಿಬ್ಬಂದಿಗಳಾದ ರಾಜು, ಸಿದ್ದೇಶ್, ಪ್ರದೀಪ್, ಬಿಳಿಗೌಡ, ವೀರಭದ್ರ ,ಪವಿತ್ರ ಇದ್ದರು.