×
Ad

ವಿರಾಟ ದಾಖಲೆ

Update: 2018-10-24 23:21 IST

ಅತ್ಯಂತ ವೇಗವಾಗಿ 10,000 ರನ್ ಗಳಿಸಿ ತೆಂಡುಲ್ಕರ್ ದಾಖಲೆ ಮುರಿದ ಕೊಹ್ಲಿ

ವಿಂಡೀಸ್ ವಿರುದ್ಧ ಬುಧವಾರ ವಿಶಾಖಪಟ್ಟಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಅಜೇಯ 157 ರನ್ ಗಳಿಸಿದ ವಿರಾಟ್ ಕೊಹ್ಲಿ ತನ್ನ 205ನೇ ಇನಿಂಗ್ಸ್‌ನಲ್ಲಿ 10 ಸಾವಿರ ರನ್ ಪೂರೈಸಿ ಹೊಸ ದಾಖಲೆ ನಿರ್ಮಿಸಿದರು. ಈ ಮೂಲಕ ‘ಬ್ಯಾಟಿಂಗ್ ಮಾಂತ್ರಿಕ’ ಸಚಿನ್ ತೆಂಡುಲ್ಕರ್ ದಾಖಲೆ ಮುರಿದರು. ತೆಂಡುಲ್ಕರ್ 2001ರಲ್ಲಿ ತನ್ನ 259ನೇ ಇನಿಂಗ್ಸ್‌ನಲ್ಲಿ 10,000 ರನ್ ಕ್ಲಬ್‌ಗೆ ಸೇರಿದ್ದರು. ಕೊಹ್ಲಿ ಏಕದಿನ ಪಂದ್ಯದಲ್ಲಿ 10,000 ರನ್ ಗಳಿಸಿದ ಭಾರತದ 5ನೇ ಹಾಗೂ ವಿಶ್ವದ 13ನೇ ಬ್ಯಾಟ್ಸ್‌ಮನ್.ತೆಂಡುಲ್ಕರ್ ಬಳಿಕ ಕಿರಿಯ ವಯಸ್ಸಿಯಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 2ನೇ ದಾಂಡಿಗ ಕೊಹ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor