ಈಶ್ವರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Update: 2018-10-25 13:51 GMT

ಶಿವಮೊಗ್ಗ, ಅ. 25: ಕನಕ ಪೀಠ ಸ್ಥಾಪನೆ ವೇಳೆ ಹಣ ಕೊಡಲಾಗದ ಈಶ್ವರಪ್ಪಗೆ, ಕುರುಬ ಸಮುದಾಯಕ್ಕೆ ತನ್ನ ಕೊಡುಗೆ ಏನೆಂದು ಕೇಳುವ ಯಾವುದೇ ನೈತಿಕತೆಯಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಗುರುವಾರ ಶಿಕಾರಿಪುರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್-ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಗಿನೆಲೆಯಲ್ಲಿ ಕನಕ ಪೀಠ ಸ್ಥಾಪನೆಗಾಗಿ ಸಭೆ ನಡೆಸಲಾಗಿತ್ತು. ಕನಕ ಪೀಠ ಸ್ಥಾಪನೆಗೆ ಸಭೆ ನಡೆದಾಗ ಒಬ್ಬೊಬ್ಬ ನಾಯಕರು ಐದು ಲಕ್ಷ ದೇಣಿಗೆ ನೀಡಿ ಎಂದಿದ್ದೆ. ಆ ಸಭೆಗೆ ಈಶ್ವರಪ್ಪ ಹಾಜರಿದ್ದರು. ಆಲ್ಲದೇ, ಮುಂದಿನ ಸಭೆಯಲ್ಲಿ ಆ ಕೆಲಸ ಆಗಬೇಕು ಎಂದು ತಿಳಿಸಲಾಗಿತ್ತು. ಆದರೆ ಮುಂದಿನ ಸಭೆಗೆ ಈಶ್ವರಪ್ಪ ಹಣ ಕೊಡಬೇಕು ಎಂದು ಗೈರು ಹಾಜರಿ ಆಗಿದ್ದರು. ಆದರೆ ಬಂಗಾರಪ್ಪ ಕನಕ ಪೀಠಕ್ಕೆ ಅವರ ಸ್ವಂತ ಹಣ ನೀಡಿದ್ದರು ಎಂದರು.

ಆದರೆ ಪ್ರತಿ ಬಾರಿ ಈಶ್ವರಪ್ಪ ಸಿದ್ದರಾಮಯ್ಯನ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಕನಕ ಪೀಠದ ಸ್ಥಾಪನೆ ಸಂದರ್ಭದಲ್ಲಿ ಎಲ್ಲಿ ಹೋಗಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಹಿಂದುಳಿದ ಸಮಾಜದ ಉದ್ದಾರಕ್ಕೆ ಬಿಎಸ್ ವೈ ಅವರ ಕೊಡುಗೆ ಶೂನ್ಯವಾಗಿದೆ. ಹಿಂದುಳಿದ ವರ್ಗ ವಿರೋಧಿ, ಮಹಿಳಾ ವಿರೋಧಿ ಹಾಗೂ ಸಂವಿಧಾನ ವಿರೋಧಿಯಾದ ಬಿಜೆಪಿ ಸರ್ಕಾರ ಇರಬಾರದು ಎಂದರು.

ಹವಣಿಕೆ: ಬಳ್ಳಾರಿಯಲ್ಲಿ ಶ್ರೀರಾಮುಲು ಅವರಿಗೆ ಮತ್ತು ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೆ 420 ಸೆಕ್ಷನ್ ಗೊತ್ತು. ಆದರೆ ಹೈದರಾಬಾದ್ ಕರ್ನಾಟಕ ಅಭಿವೃದ್ದಿಯ 371 ಜೆ ಬಗ್ಗೆ ಗೊತ್ತಿಲ್ಲವೆಂದು ಹೇಳಿದ್ದು ಹೌದು. ಆದರೆ ಬಿಎಸ್ ವೈ ಇದನ್ನ ಜಾತಿ ರಾಜಕಾರಣ ಮಾಡಲು ಹವಣಿಸುತ್ತಿದ್ದಾರೆ. ವಾಲ್ಮೀಕಿ ಜನಾಂಗದವರನ್ನ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News