ತುಮಕೂರು: ಸರಗಳ್ಳರ ಬಂಧನ; 3.75 ಲಕ್ಷ ಮೌಲ್ಯದ ಚಿನ್ನ, ಬೈಕ್ ವಶ

Update: 2018-10-25 14:01 GMT

ತುಮಕೂರು,ಅ.25: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯದ ಸರ ಅಪಹರಿಸಿದ್ದ ತಂಡವನ್ನು ತಿಪಟೂರು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 3.75 ಲಕ್ಷ ಬೆಲೆ ಬಾಳುವ ಮಾಂಗಲ್ಯದ ಸರ ಹಾಗೂ ಒಂದು ಮೋಟಾರು ಬೈಕ್ ವಶಪಡಿಸಿಕೊಂಡಿದ್ದಾರೆ.

ಕಳೆದ ಅ.19ರಂದು ತಿಪಟೂರು ನಗರದ ಸಾಯಿಬಾಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಪಾವರ್ತಮ್ಮ ಎಂಬ ಮಹಿಳೆಯ ಚಿನ್ನದ ಸರವನ್ನು ಮೋಟಾರು ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಅಪಹರಿಸಿ ಪರಾರಿಯಾಗಿದ್ದರು. ಸರಗಳ್ಳರ ಪತ್ತೆಗೆ ತಿಪಟೂರು ಡಿವೈಎಸ್ಪಿ ವೇಣುಗೋಪಾಲ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡ ತಂಡ ಇಂದು ಆರೋಪಿಗಳಾದ ಹಾಸನ ಜಿಲ್ಲೆ ಹೊಳೆನರಸಿಪುರ ಪಟ್ಟಣದ ಇರ್ಪಾನ್ ಪಾಷ, ತುಮಕೂರು ಟೌನ್ ನಿವಾಸಿ ಮದಾಸಿರ್ ಅಹಮದ್ ಅವರುಗಳನ್ನು ಬಂಧಿಸಿ, ತುಮಕೂರು ಹಾಗು ವಿವಿಧೆಡೆಗಳಲ್ಲಿ ನಡೆದಿದ್ದು ಸುಮಾರು 6 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಹೆಚ್ಚಿದ್ದು, ಬಂಧಿತರಿಂದ 3.75 ಲಕ್ಷ ಬೆಲೆ ಬಾಳುವ ಚಿನ್ನದ ಮಾಂಗಲ್ಯದ ಸರ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಅಪ್ಪಾಚ್ಚಿ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ತಿಪಟೂರು ನಗರ ಠಾಣೆಯ ಸಿಬ್ಬಂದಿಗಳಾದ ಉಸ್ಮಾನ ಸಾಬ್, ಚಿನ್ನಣ್ಣ, ಪಂಚಯ್ಯ, ಓಂಕಾರಮೂರ್ತಿ, ದಕ್ಷಿಣಮೂರ್ತಿ,ರಾಜಶೇಖರ್, ಮಹೇಶ, ಮತ್ತು ಮಂಜುನಾಥ ಟಿ.ಎಂ ರವರ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News