ಗಣರಾಜ್ಯೋತ್ಸವಕ್ಕೆ ಭಾರತದ ಆಹ್ವಾನ ತಿರಸ್ಕರಿಸಿದ ಟ್ರಂಪ್

Update: 2018-10-28 05:40 GMT

ಹೊಸದಿಲ್ಲಿ, ಅ.28: ಮುಂಬರುವ ಗಣರಾಜ್ಯೋತ್ಸವಕ್ಕೆ  ಮುಖ್ಯ ಅತಿಥಿಯಾಗಿ ಆಗಮಿಸಲು ಭಾರತ  ನೀಡಿರುವ  ಆಹ್ವಾನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ.

ಕಳೆದ ಎಪ್ರಿಲ್ ನಲ್ಲಿ   ಡೊನಾಲ್ಡ್ ಟ್ರಂಪ್ ಗೆ ಅಧಿಕೃತವಾಗಿ ಆಹ್ವಾನ ಪತ್ರ ಕಳುಹಿಸಿತ್ತು. ಆದರೆ  ಜನವರಿಯಲ್ಲಿ  ಟ್ರಂಪ್ ಅವರಿಗೆ ಆನೇಕ ಕಾರ್ಯಕ್ರಮಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಅವರಿಗೆ ಭಾಗವಹಿಸಲು ಸಾಧ್ಯವಾಗದು ಎಂದು ವೈಟ್ ಹೌಸ್ ಸ್ಪಷ್ಟನೆ ನೀಡಿದೆ.

ಪ್ರತಿವರ್ಷ ಗಣರಾಜ್ಯೋತ್ಸವಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸುವುದು ವಾಡಿಕೆ. ಈ ಕಾರಣದಿಂದಾಗಿ ಮುಂಬರುವ ಗಣರಾಜ್ಯೋತ್ಸವಕ್ಕೆ ಟ್ರಂಪ್ ಗೆ ಆಹ್ವಾನ ನೀಡಲಾಗಿತ್ತು.

ಅಮೆರಿಕ ನೀಡಿರುವ  ಎಚ್ಚರಿಕೆಯನ್ನು ಭಾರತ ಲಘವಾಗಿ ಪರಿಗಣಿಸಿರುವ  ಹಿನ್ನೆಲೆಯಲ್ಲಿ ಟ್ರಂಪ್ ಕೋಪಗೊಂಡಿದ್ದಾರೆ. 

ಭಾರತ ಎಸ್​-400 ಮಿಸೈಲ್​ ಖರೀದಿಗೆ ರಶ್ಯ  ಜತೆ ಒಪ್ಪಂದ ಮಾಡಿಕೊಂಡಿರುವುದು ಮತ್ತು ಇರಾನ್​ನಿಂದ ಭಾರತ ಕಚ್ಚಾತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸದಿರುವ ಕಾರಣದಿಂದಾಗಿ  ಟ್ರಂಪ್​ ಭಾರತಕ್ಕೆ ಆಗಮಿಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News