ದಾಳಿಗಳ ಮೂಲಕ ನಮ್ಮ ಸದ್ದಡಗಿಸಲು ಮೋದಿ ಸರಕಾರ ಯತ್ನ: ಆ್ಯಮ್ನೆಸ್ಟಿ

Update: 2018-10-28 16:15 GMT

ಬೆಂಗಳೂರು, ಅ. 29: ದಾಳಿ ನಡೆಸುವ ಮೂಲಕ ಮೋದಿ ಸರಕಾರ ನಮ್ಮನ್ನ ಮೌನವಾಗಿರಿಸಲು ಪ್ರಯತ್ನಿಸುತ್ತಿದೆ ಎಂದು ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಹೇಳಿದೆ. ಕಾನೂನು ಬಾಹಿರವಾಗಿ ವಿದೇಶಿ ನಿಧಿ ಸ್ವೀಕರಿಸುವ ಆರೋಪದಲ್ಲಿ ಗುರುವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಹಿನ್ನಲೆಯಲ್ಲಿ ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಈ ಹೇಳಿಕೆ ನೀಡಿದೆ.

ಕೆಲವು ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಗ್ರೀನ್‌ಪೀಸ್ ಹಾಗೂ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಅನ್ನು ಮುಚ್ಚಲು ಪ್ರಯತ್ನಿಸಿರುವ ಕ್ರಮದ ಹಿಂದೆ ಯಾವುದೇ ಸೂಕ್ತ ಕಾರಣಗಳು ಕಂಡು ಬರುವುದಿಲ್ಲ. ಇದು ಒಟ್ಟಿಗೆ ತೆಗೆದುಕೊಂಡು ಕ್ರಮ ಎಂಬುದು ನನ್ನ ಭಾವನೆ. ಮುಕ್ತ ಹಾಗೂ ಸ್ವತಂತ್ರ ಧ್ವನಿ ಅಡಗಿಸುವ ನಿರ್ದಿಷ್ಟ ಉದ್ದೇಶದಿಂದ ಕೈಗೊಳ್ಳಲಾದ ಕ್ರಮ ಎಂದು ಆ್ಯಮ್ನೆಸ್ಟಿ ಯ ಆಕಾರ್ ಪಟೇಲ್ ಹೇಳಿದ್ದಾರೆ. ವಾಣಿಜ್ಯ ದಾರಿಯ ಮೂಲಕ 36 ಕೋ. ರೂ. ವಿದೇಶಿ ನಿಧಿಯನ್ನು ಈ ಆ್ಯಮ್ನೆಸ್ಟಿ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಕಚೇರಿಯ ಶೋಧ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರೀನ್ ಪೀಸ್ ಹಾಗೂ ಆ್ಯಮ್ನೆಸ್ಟಿಯ ಬ್ಯಾಂಕ್ ಖಾತೆಯನ್ನು ಸ್ತಂಬನಗೊಳಿಸಲಾಗಿತ್ತು. ಈ ತಿಂಗಳ ಆರಂಭದಲ್ಲಿ ಗ್ರೀನ್‌ಪೀಸ್‌ನ ಬೆಂಗಳೂರು ಕಚೇರಿಯ ಮೇಲೆ ದಾಳಿ ನಡೆಸಲಾಗಿತ್ತು. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ. ಯಾಕೆಂದರೆ ಇದು ಪ್ರಜಾಪ್ರಭುತ್ವವನ್ನು ಪೋಷಿಸುವ ಸಮಾಜದಲ್ಲಿ ನಡೆದಿದೆ. ಗ್ರೀನ್‌ಪೀಸ್ ಕಚೇರಿ ಮೇಲೆ ಈ ಹಿಂದೆ ನಡೆದ ದಾಳಿ ಅನುಸರಿಸಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಮೇಲೆ ನಡೆದಿಲ್ಲ. ನಮ್ಮ ಬ್ಯಾಂಕ್ ಖಾತೆ ಸ್ತಂಭನಗೊಳಿಸಲಾಗಿದೆ. ಇದನ್ನು ನಿಲ್ಲಿಸಬೇಕು ಎಂದು ಗ್ರೀನ್‌ಪೀಸ್ ಭಾರತದ ಕಾರ್ಯಕಾರಿ ನಿರ್ದೇಶಕ ಕ್ಷಿತಿಜ್ ಅರಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News