ಹನೂರು: ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ
Update: 2018-10-28 22:22 IST
ಹನೂರು,ಅ.28: ಗುಂಡಾಲ್ ಜಲಾಶಯದ ಕಾಲುವೆಯ ಬಳಿಯ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಹನೂರು ಸಮೀಪದ ಕಾಮಗೆರೆ ಗ್ರಾಮದ ಮಾದೇವ ಬಂಧಿತ ಆರೋಪಿ. ಈತ ಗುಂಡಾಲ್ ಜಲಾಶಯದ ಕಾಲುವೆಯ ಬಳಿ ಜಮೀನನ್ನು ಹೊಂದಿದ್ದು, ಅಕ್ರಮವಾಗಿ ಗಾಂಜಾವನ್ನು ಬೆಳೆದಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್ಸ್‍ಪೆಕ್ಟರ್ ಮೋಹಿತ್ ಸಹದೇವ್ ಹಾಗೂ ತಂಡ ಜಮೀನಿನ ಮೇಲೆ ದಾಳಿ ನಡೆಸಿ ಸುಮಾರು 1 ಲಕ್ಷ ರೂ ಮೌಲ್ಯದ 31.5 ಕೆಜಿಯ 12 ಗಾಂಜಾ ಗಿಡವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿಯಲ್ಲಿ ಮುಖ್ಯ ಪೇದೆಗಳಾದ ಸಿದ್ದೇಶ್, ಮಲ್ಲಿಕಾರ್ಜುನ, ರಾಮದಾಸ್, ಜಮೀಲ್, ಪೇದೆಗಳಾದ ರಾಜು, ಚಂದ್ರಶೇಖರ್, ವೀರಭದ್ರ, ಪ್ರದೀಪ್, ವಿಶ್ವನಾಥ್, ಮಕಂದರ್, ರಾಮಶೆಟ್ಟಿ ಹಾಗೂ ವೈದ್ಯಾಧಿಕಾರಿ ಇಜಾಜ್ ಉಲ್ಲಖಾನ್ ಇದ್ದರು.