ಹನೂರು: ಇಸ್ಪಿಟ್ ಅಡ್ಡೆಗೆ ದಾಳಿ; 12 ಜನರ ಬಂಧನ
Update: 2018-10-30 22:39 IST
ಹನೂರು,ಅ.30: ಇಸ್ಪಿಟ್ ಅಡ್ಡೆಯ ಮೇಲೆ ರಾಮಾಪುರ ಪೋಲಿಸರು ದಾಳಿ ನಡೆಸಿ 12 ಜನರನ್ನು ಬಂಧಿಸಿ, 1.4 ಲಕ್ಷ ರೂ. ಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ನೆಲ್ಲೂರಿನಲ್ಲಿ ನಡೆದಿದೆ.
ಪಾಲಾರ್ ನದಿ ದಡದ ಸಮೀಪ ಇಸ್ಪೀಟ್ ಆಟವಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 12 ಜನರನ್ನು ಬಂಧಿಸಿದ್ದು, ಅವರಿಂದ 1.4 ಲಕ್ಷ ರೂ. ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೂಂಡಿದ್ದಾರೆ. ಈ ಸಂಬಂಧ ರಾಮಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.