×
Ad

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಸ್ಸೆನ್ನೆಲ್ ನೌಕರರಿಂದ ಧರಣಿ

Update: 2018-10-30 22:45 IST

ದಾವಣಗೆರೆ,ಅ.30: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬಿಎಸ್‍ಎನ್‍ಎಲ್ ನೌಕರರು ನಗರದ ಪಿಜೆ ಬಡಾವಣೆಯಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.   

ಮೂರನೇ ವೇತನ ಪರಿಷ್ಕರಣೆ, ಪಿಂಚಣಿ ಪರಿಷ್ಕರಣೆ ಮಾಡಬೇಕು. ನೇರ ನೇಮಕವಾಗಿರುವ ನೌಕರರಿಗೆ ಶೇ. 30 ರ ನಿವೃತ್ತಿ ಸವಲತ್ತುಗಳನ್ನು ನೀಡಬೇಕು. ಮೂಲವೇತನದ ಮೇಲೆ ಮಾತ್ರ ಪಿಂಚಣಿ ದೇಣಿಗೆ ಕಡಿತಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ಆದೇಶವಿದೆ. ಆದರೆ ಬಿಎಸ್‍ಎನ್‍ಎಲ್ ನೌಕರರಿಗೆ ಈ ಆದೇಶ ಇನ್ನೂ ಜಾರಿ ಆಗಿಲ್ಲ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

ದೂರ ಸಂಪರ್ಕ ಕ್ಷೇತ್ರದ ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳನ್ನು ದೇಶದಲ್ಲಿ ಅನುಷ್ಟಾನಗೊಳಿಸಲು ಸರ್ವರೀತಿಯಲ್ಲಿಯೂ ಬಿಎಸ್‍ಎನ್‍ಎಲ್ ಕಂಪನಿ ಸಹಕಾರ ನೀಡುತ್ತಿದೆ. ಬೇರೆ ಖಾಸಗಿ ಕಂಪನಿಗಳ ರೀತಿ ಕೋಟಿ ರೂ. ಗಳ ಬ್ಯಾಂಕ್ ಸಾಲವಿಲ್ಲ. ದೇಶದ ಸಾಮಾಜಿಕ ಜವಾಬ್ದಾರಿಯನ್ನು ಬಿಎಸ್‍ಎನ್‍ಎಲ್ ಕಂಪನಿ ನಿರ್ವಹಿಸುತ್ತಿದೆ. ಬಿಎಸ್‍ಎನ್‍ಎಲ್ ಕಂಪೆನಿಗೆ ಅತೀ ಶೀಘ್ರದಲ್ಲಿ ಕೇಂದ್ರ ಸರ್ಕಾರ 4ಜಿ ಸೇವೆ ಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೂರಾರು ನೌಕರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News