ಅಥ್ಲೀಟ್ ಗಳಿಗೆ ಸ್ಪೋರ್ಟ್ಸ್ ಕಿಟ್ ಗಳನ್ನು ಎಸೆದ ಸಚಿವ ದೇಶಪಾಂಡೆ: ವಿಡಿಯೋ ವೈರಲ್

Update: 2018-11-01 15:03 GMT

ಬೆಂಗಳೂರು, ನ.1: ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಥ್ಲೀಟ್ ಗಳಿಗೆ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಆರ್. ವಿ. ದೇಶಪಾಂಡೆ ಸ್ಪೋರ್ಟ್ ಕಿಟ್ ಗಳನ್ನು ಅಥ್ಲೀಟ್ ಗಳಿಗೆ ಎಸೆದ ಘಟನೆ ವಿವಾದ ಸೃಷ್ಟಿಸಿದೆ.

ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗಾಗಿ ಕಾರವಾರದ ಹಳಿಯಾಳದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಚಿವ ಆರ್.ವಿ. ದೇಶಪಾಂಡೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳ ಭಾಷಣದ ಬಳಿಕ ಸಚಿವರು ಅಥ್ಲೀಟ್ ಗಳಿಗೆ ಕಿಟ್ ಗಳನ್ನು ನೀಡಿ ಸನ್ಮಾನಿಸಬೇಕಿತ್ತು. ಆದರೆ ಸ್ಪೋರ್ಟ್ಸ್ ಕಿಟ್ ಗಳನ್ನು ಸಚಿವರು ಕ್ರೀಡಾಪಟುಗಳಿಗೆ ಎಸೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, “ಅನಾವಶ್ಯಕವಾಗಿ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಅವರೆಲ್ಲರೂ ನನಗೆ ಪರಿಚಯವಿದ್ದ ಹುಡುಗರೇ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News