×
Ad

ಪರೀಕ್ಷೆಯಲ್ಲಿ ಅಜ್ಜಿ ಶೇ.98..!

Update: 2018-11-01 23:49 IST

ಕೇರಳದಲ್ಲಿ ನಡೆದ ಸಾಕ್ಷರತಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ 96ರ ಹರೆಯದ ಅಜ್ಜಿ ಯೋರ್ವರು ಕಲಿಕೆಗೆ ವಯಸ್ಸು ಅಡ್ಡಿಯಲ್ಲ ಎನ್ನುವುದನ್ನು ಸಾಬೀತುಗೊಳಿಸಿದ್ದಾರೆ. ಕೇರಳ ರಾಜ್ಯ ಸಾಕ್ಷರತಾ ಅಭಿಯಾನ ಪ್ರಾಧಿಕಾರದ ‘ಅಕ್ಷರಲಕ್ಷಂ’ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಳಪ್ಪುಝಾ ಜಿಲ್ಲೆಯ ಚೆಪ್ಪಾಡ್ ಗ್ರಾಮದ ಕಾರ್ತ್ಯಾಯನಿ ಅಮ್ಮ 100 ಅಂಕಗಳಲ್ಲಿ 98 ಅಂಕಗಳನ್ನು ಗಳಿಸಿ ಸಾಧನೆಯನ್ನು ಮೆರೆದಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಕಾರ್ತ್ಯಾಯನಿ ಅಮ್ಮನ ಸಾಧನೆಗೆ ಮೆಚ್ಚುಗೆಯ ಕುರುಹಾಗಿ ಅವರಿಗೆ ‘ಅಕ್ಷರಲಕ್ಷಂ ಪ್ರಮಾಣಪತ್ರ’ವನ್ನು ಪ್ರದಾನಿಸಿದರು. ಕಾರ್ತ್ಯಾಯನಿ ಅಮ್ಮ ಬರವಣಿಗೆಯಲ್ಲಿ 40ಕ್ಕೆ 38 ಅಂಕಗಳು ಹಾಗೂ ಗಣಿತ ಮತ್ತು ಓದುವಿಕೆಯಲ್ಲಿ ತಲಾ 30 ಪೂರ್ಣ ಅಂಕಗಳನ್ನು ಗಳಿಸಿದ್ದಾರೆ ಎಂದು ತಿಳಿಸಿದ ಅಭಿಯಾನದ ನಿರ್ದೇಶಕಿ ಪಿ.ಎಸ್.ಶ್ರೀಕಲಾ ಅವರು ,ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಯಸಿರುವ ಸಹಸ್ರಾರು ಜನರಿಗೆ ಅವರು ಆದರ್ಶ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor