×
Ad

ಮಂಡ್ಯ: ಬಳ್ಳೇಕೆರೆಯಲ್ಲಿ ಮತದಾನ ಬಹಿಷ್ಕಾರ

Update: 2018-11-03 21:27 IST

ಮಂಡ್ಯ, ನ.3: ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಳ್ಳೇಕೆರೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆಬೇಕೆಂದು ಪಟ್ಟುಹಿಡಿದು ಮತದಾನವನ್ನು ಬಹಿಷ್ಕರಿಸಿದರು. ಗ್ರಾಮದ 380 ಮಂದಿ ಮತದಾರರ ಪೈಕಿ ಯಾರೊಬ್ಬರೂ 7ಕಿ.ಮೀ ದೂರದ ಶ್ಯಾರಹಳ್ಳಿ ಗ್ರಾಮಕ್ಕೆ ಹೋಗಿ ಮತದಾನ ಮಾಡದೇ ಮತದಾನದಿಂದ ದೂರ ಉಳಿದರು.

ಮಧ್ಯಾಹ್ನ 12ಗಂಟೆಯಿಂದ ಸಂಜೆ 4ಗಂಟೆಯವರೆಗೂ ತಹಶೀಲ್ದಾರ್ ಬಿ.ಎಚ್.ತಿಗರಿ ಹಾಗೂ ರಾಜಸ್ವ ನಿರೀಕ್ಷಕ ರಾಮಚಂದ್ರಪ್ಪ ಅವರು ಗ್ರಾಮದಲ್ಲಿ ಮೊಕ್ಕಾಂ ಹೂಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಸಹ ಯಾವುದೇ ಮತದಾರರು ಮತದಾನ ಮಾಡಲು ಒಪ್ಪಲಿಲ್ಲ. ಹಾಗಾಗಿ ತಹಶೀಲ್ದಾರ್ ಅವರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News