ಹನೂರು: ನರೇಗಾ ಯೋಜನೆಯ ಜಾಬ್ ಕಾರ್ಡ್ ವಿತರಣೆ
ಹನೂರು,ನ.4: ಆಲಂಬಾಡಿಯಲ್ಲಿ ಹಮ್ಮಿಕೂಂಡಿದ್ದ ವಿವಿಧ ಅಭಿವೃದ್ದಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಹಾಗು ಬುಡಕಟ್ಟು ಜನಾಂಗದವರೊಡನೆ ಸಮಾಲೋಚನೆ ಮತ್ತು ಅಹವಾಲು ಸ್ವಿಕಾರ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್‍ಕುಮಾರ್ ಆಲಂಬಾಡಿ ಗ್ರಾಮದ ವಾಸಿಗಳಿಗೆ ನರೇಗಾ ಯೋಜನೆಯ ನವೀಕರಣ ವಿನ್ಯಾಸದ ಜಾಬ್ ಕಾರ್ಡ್‍ನ್ನು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಪ್ರತಿ ಕುಟುಂಬಕ್ಕೆ ಒಂದು ಕುಟುಂಬಕ್ಕೆ ನೂರು ದಿನಗಳ ಕೂಲಿ ಕೆಲಸ ಮಾಡಲು ಅವಕಾಶವಿದ್ದು, ದಿನಕ್ಕೆ 249/- ರೂಗಳನ್ನು ಸರ್ಕಾರ ನಿಗದಿ ಮಾಡಿದೆ. ಗ್ರಾಮ ವಾಸಿಗಳು ಕೆಲಸ ಮಾಡುವುದರ ಮುಖಾಂತರ ಗ್ರಾಮಗಳ ಮೂಲಭೂತ ಅಭಿವೃದ್ದಿ ಕೆಲಸ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು. ವಲಸೆ ಹೋಗುವುದನ್ನು ತಪ್ಪಿಸುವುದು, ಕುಟುಂಬಗಳ ಆರ್ಥಿಕ ಮಟ್ಟ ಸುಧಾರಿಸುವುದು ನರೇಗಾ ಯೋಜನೆಯ ಉದ್ದೇಶ ಎಂದರು. ಈ ಸಂದರ್ಭದಲ್ಲಿ ಹಲವರಿಗೆ ನರೇಗಾ ಜಾಬ್ ಕಾರ್ಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೋಪಿನಾಥ ಗ್ರಾ.ಪಂ ಅಧ್ಯಕ್ಷ ಮುರುಗೇಶ್, ಪಿ.ಡಿ.ಓ ರಾಜೇಶ್ ಹಾಗು ಬುಡಕಟ್ಟು ಜನಾಂಗದ ಮುಖ್ಯಸ್ಥರಿದ್ದರು.