×
Ad

ಹನೂರು: ಜಮೀನಿನಲ್ಲಿ ಗಾಂಜಾ ಬೆಳೆದ ಮೂವರ ಬಂಧನ

Update: 2018-11-04 22:11 IST

ಹನೂರು,ನ.4: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 22.8 ಕೆಜಿ ಗಾಂಜಾವನ್ನು ವಶಪಡಿಸಿ, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ರಾಮಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೌದಳ್ಳಿ ಸಮೀಪದ ಎಂ.ಜಿ ದೊಡ್ಡಿ ಗ್ರಾಮದ ಚಿನ್ನಪ್ಪ, ಅಂತೋಣಿಸ್ವಾಮಿ ಹಾಗೂ ರಾಜಪ್ಪ ಬಂಧಿತ ಆರೋಪಿಗಳು. ಈ ಮೂವರು ತಮ್ಮ ಜಮೀನಿನಲ್ಲಿ ಫಸಲಿನ ಮಧ್ಯೆ ಗಾಂಜಾವನ್ನು ಬೆಳೆದಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮಾಪುರ ಇನ್ಸ್ ಪೆಕ್ಟರ್ ಮನೋಜ್‍ಕುಮಾರ್ ಮತ್ತು ತಂಡ ದಾಳಿ ನಡೆಸಿ, ಗಾಂಜಾವನ್ನು ವಶಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಈ ಸಂಬಂಧ ರಾಮಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News